ಜಿಲ್ಲಾ ಪ್ರಾಂಶುಪಾಲರ ಸಂಘಕ್ಕೆ ಪ್ರಭು ಅಧ್ಯಕ್ಷ

S Prabhu - Copy
Published on

ಬೀದರ್: ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿ ಸಿದ್ಧಾರ್ಥ ಕಾಲೇಜಿನ ಪ್ರಾಚಾರ್ಯ ಎಸ್.ಪ್ರಭು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ನಗರದಲ್ಲಿ ಆಯೋಜಿಸಿದ ಸಭೆಯಲ್ಲಿ 2025-26ರಿಂದ 2027-28ನೇ ಶೈಕ್ಷಣಿಕ ಸಾಲಿನ ಅವಧಿಗಾಗಿ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪದಾಧಿಕಾರಿಗಳು ಇಂತಿವೆ: ಚಂದ್ರಕಾಂತ ಶಹಾಬಾದಕರ್(ಗೌರವಾಧ್ಯಕ್ಷ), ಡಾ.ಚಂದ್ರಕಾಂತ ಗಂಗಶೆಟ್ಟಿ (ಪ್ರಧಾನ ಕಾರ್ಯದರ್ಶಿ), ಡಾ.ಮನ್ಮಥ ಡೋಳೆ (ಕಾರ್ಯಾಧ್ಯಕ್ಷ), ಬಾಲಾಜಿ ವಾಡೇಕರ್ (ರಾಜ್ಯ ಪ್ರತಿನಿಧಿ), ಶಿವರಾಜ ಬಿರಾದಾರ್, ಸಂಗಪ್ಪ ಕೋರೆ, ರಮೇಶ ಪಾಟೀಲ್ (ಉಪಾಧ್ಯಕ್ಷರು), ಶಿವರಾಜ ನಾಯಕ್ (ಖಜಾಂಚಿ), ಮಹ್ಮದ್ ರಫಿ (ಸಹ ಕಾರ್ಯದರ್ಶಿ), ಮಾರುತಿರಡ್ಡಿ (ಸಂಘಟನಾ ಕಾರ್ಯದರ್ಶಿ), ಡಾ.ಬಸವರಾಜ ಬಲ್ಲೂರ (ಸಾಂಸ್ಕೃತಿಕ ಕಾರ್ಯದರ್ಶಿ), ಪ್ರತಿಭಾ ಡಿ., ಮಂಗಲಾ (ಮಹಿಳಾ ಪ್ರತಿನಿಧಿಗಳು), ಗೋವಿಂದ, ಶ್ರೀಕಾಂತ ದೇಶಪಾಂಡೆ (ಗೌರವ ಸಲಹೆಗಾರರು) ಆಯ್ಕೆಯಾಗಿದ್ದಾರೆ.

ತಾಲೂಕು ಅಧ್ಯಕ್ಷರು: ಡಾ.ಜೈಶೇನ ಪ್ರಸಾದ (ಬಸವಕಲ್ಯಾಣ), ಜೈಕಾಂತ ಗಂಗೋಜಿ (ಭಾಲ್ಕಿ), ಮಲ್ಲಿನಾಥ (ಹುಮನಾಬಾದ್), ಶಿವಾಜಿ (ಕಮಲನಗರ), ಬಸವರಾಜ ದಿಗಾಡೆ (ಚಿಟಗುಪ್ಪ), ವಿಜಯಕುಮಾರ ತೋರಣೆಕರ್ (ಬೀದರ್), ರೇವಣಯ್ಯಾ ಮಠ (ಔರಾದ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net