ಯೋಗದಿಂದ ದೇಹಕ್ಕೆ ನವ ಚೈತನ್ಯ

Future Kids School -1
Published on

ಬೀದರ್: ಯೋಗದಿಂದ ದೇಹ ಹಾಗೂ ಮನಸ್ಸಿಗೆ ನವ ಚೈತನ್ಯ ಸಿಗುತ್ತದೆ ಎಂದು ಇಂಟರ್‍ನ್ಯಾಷನಲ್ ನೆಚರೋಪತಿ ಆರ್ಗನೈಸೇಷನ್ ಜಿಲ್ಲಾ ಸಂಚಾಲಕಿ ಡಾ. ಮಂಜುಳಾ ಮುಚಳಂಬೆ ಹೇಳಿದರು.

ನಗರದ ಫ್ಯೂಚರ್ ಕಿಡ್ಸ್ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಈಚೆಗೆ ನಡೆದ ಯೋಗ ಪ್ರಾತ್ಯಕ್ಷಿಕೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉತ್ತಮ ಆರೋಗ್ಯಕ್ಕೆ ಯೋಗ ಅವಶ್ಯಕ. ಪ್ರತಿಯೊಬ್ಬರೂ ನಿತ್ಯ ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಇಶಾನಿ ಮುಚಳಂಬೆ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಇಂಟರ್‍ನ್ಯಾಷನಲ್ ನೆಚರೋಪತಿ ಆರ್ಗನೈಸೇಷನ್ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಪಾಟೀಲ, ಶಾಲೆಯ ಅಧ್ಯಕ್ಷ ಸಂದೀಪ್ ಶೆಟಕಾರ್, ಪ್ರಾಚಾರ್ಯೆ ಚಿತ್ರಾ ಶೆಟಕಾರ್ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ, ಇಂಟರ್‍ನ್ಯಾಷನಲ್ ನೆಚರೋಪತಿ ಆರ್ಗನೈಸೇಷನ್ ಹಾಗೂ ಸೂರ್ಯ ಫೌಂಡೇಷನ್ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net