50 ಕಡೆ ಯೋಗ ಪ್ರಾತ್ಯಕ್ಷಿಕೆ 21ಕ್ಕೆ

Yogendra Yadlapure - Copy
Published on

ಬೀದರ್: ಪತಂಜಲಿ ಯೋಗ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಶನಿವಾರ (ಜೂ.21) ಜಿಲ್ಲೆಯ 50 ಸ್ಥಳಗಳಲ್ಲಿ ಏಕಕಾಲಕ್ಕೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಯೋಗ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ.

ಕೇಂದ್ರ ಸರ್ಕಾರದ ಆಯುಷ್ ಇಲಾಖೆ, ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ, ಐ.ಎನ್.ಒ. ಹಾಗೂ ಸೂರ್ಯ ಫೌಂಡೇಷನ್ ಸಹಯೋಗದಲ್ಲಿ ಬೆಳಿಗ್ಗೆ 6 ರಿಂದ 8 ರ ವರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಪತಂಜಲಿ ಯೋಗ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಯೋಗೇಂದ್ರ ಯದಲಾಪುರೆ ತಿಳಿಸಿದ್ದಾರೆ.

ನಗರದ ಬರೀದ್ ಶಾಹಿ ಉದ್ಯಾನ, ಶಹಾಪುರ ಗೇಟ್, ನಾವದಗೇರಿ, ಕೈಲಾಶನಗರ, ಕೇಂದ್ರ ಅಂಚೆ ಕಚೇರಿ, ಶ್ರೀ ದತ್ತಗಿರಿ ಮಹಾರಾಜ ಕಾಲೇಜು, ಮೈಲೂರಿನ ಸರ್ಕಾರಿ ಪ್ರೌಢಶಾಲೆ, ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜು, ನೌಬಾದ್, ಗಾದಗಿ ಸರ್ಕಾರಿ ಪ್ರಾಥಮಿಕ ಶಾಲೆ, ಜನವಾಡ, ಮನ್ನಳ್ಳಿ, ಮಂದಕನಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜು, ಶಮಶೇರನಗರ, ಔರಾದ್ ಪಟ್ಟಣದ ಅಮರೇಶ್ವರ ಕಾಲೇಜು, ಸಂತಪುರದ ದೀಪಾಲಯ ಶಾಲೆ, ಗುರುಕುಲ ಶಾಲೆ, ಹೆಡಗಾಪುರ, ಭಾಲ್ಕಿಯ ಬಿ.ಕೆ.ಐ.ಟಿ, ಶಿವಾಜಿ ಕಾಲೇಜು, ಗುರು ಪ್ರಸನ್ನ ಶಾಲೆ, ಖಡ್ಕೇಶ್ವರ ಪ್ರೌಢಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜು, ಶಿವಾಜಿ ಕೋ ಆಪರೇಟಿವ್ ಬ್ಯಾಂಕ್, ಭಾತಂಬ್ರಾ, ಮೆಹಕರ್, ಮದಕಟ್ಟಿ, ವರವಟ್ಟಿ, ಹುಮನಾಬಾದ್‍ನ ರಾಮ್ ಆ್ಯಂಡ್ ರಾಜ್ ಕಾಲೇಜು, ತಾಲ್ಲೂಕು ನ್ಯಾಯಾಲಯ, ಹುಡಗಿ, ಸಿಂಧನಕೇರಾ, ಕಪ್ಪರಗಾಂವ್, ಘಾಟಬೋರಾಳ್, ಬಸವಕಲ್ಯಾಣದ ಅರವಿನ ಮನೆ ಆವರಣ, ಪುಣ್ಯಕೋಟಿ ಕಾಲೇಜು, ಹಾರಕೂಡ ಕಾಲೇಜು, ಚಿಟಗುಪ್ಪ, ಹುಲಸೂರು, ಕಮಲನಗರ, ವಿವಿಧ ಹೋಬಳಿ, ಗ್ರಾಮಗಳಲ್ಲಿ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದು ಹೇಳಿದ್ದಾರೆ.

ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಯೋಗ ಬಹಳ ಅಗತ್ಯವಾಗಿದೆ. ಯೋಗದಿಂದ ಮಾತ್ರ ಆರೋಗ್ಯಪೂರ್ಣ ಸಮಾಜ ಹಾಗೂ ದೇಶ ಕಟ್ಟಲು ಸಾಧ್ಯವಿದೆ. ಹೀಗಾಗಿ ಸಾರ್ವಜನಿಕರಲ್ಲಿ ಯೋಗ ಜಾಗೃತಿ ಮೂಡಿಸುವುದು ಕಾರ್ಯಕ್ರಮ ಆಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಪತಂಜಲಿ ಯೋಗ ಶಿಕ್ಷಕರು ಹಾಗೂ ಯೋಗ ಸಾಧಕರು ಎಲ್ಲೆಡೆ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ಸಾರ್ವಜನಿಕರು ಯೋಗ ಪ್ರಾತ್ಯಕ್ಷಿಕೆಯ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net