ಪಂಚಗವ್ಯ ತಪಾಸಣಾ ಶಿಬಿರ 21ರಂದು

Published on

ಬೀದರ್: ಉತ್ತರ ಕರ್ನಾಟಕ ಪ್ರಾಂತ ಗೋ ಸೇವಾ ಗತಿ ವಿಧಿ, ನಾಗೋರಾದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಚಾರಿಟಬಲ್ ಟ್ರಸ್ಟ್ ಸಂಚಾಲಿತ ಕಾಮಧೇನು ಗೋಶಾಲೆ ಹಾಗೂ ಶ್ರೀ ಸಿದ್ಧರಾಮೇಶ್ವರ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಸಹಯೋಗದಲ್ಲಿ ಇಲ್ಲಿಯ ಗಣೇಶ ಮೈದಾನ ಬಳಿಯ ಶ್ರೀ ಸಿದ್ಧರಾಮೇಶ್ವರ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಶನಿವಾರ (ಜೂ. 21) ಪಂಚಗವ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.

ಶಿಬಿರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರ ವರೆಗೆ ನಡೆಯಲಿದೆ. ಡಾ. ಡಿ.ಪಿ. ರಮೇಶ್ ಅವರು ರಕ್ತದೊತ್ತಡ, ಮಧುಮೇಹ, ಸೋರಿಯಾಸಿಸ್, ಕ್ಯಾನ್ಸರ್ ಮೊದಲಾದ ರೋಗಗಳ ತಪಾಸಣೆ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net