

ಬೀದರ್: ಇಲ್ಲಿಯ ಬಸವ ತತ್ವ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ದಿಲೀಪ್ ಕಮಠಾಣೆ ಅವರನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ವ್ಯವಸ್ಥಾಪಕ ಸಮಿತಿಯ ಸಹ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಲಾಗಿದೆ.
ಸಂಸ್ಥೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಬಾಲಸುಬ್ರಹ್ಮಣ್ಯ ಈ ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದ್ದಾರೆ.
ಕಮಠಾಣೆ ಅವರ ನಾಮ ನಿರ್ದೇಶನ ಅವಧಿ ಮೂರು ವರ್ಷಗಳದ್ದಾಗಿದೆ.
ಸಂಸ್ಥೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಹಾಗೂ ಕಲಬುರಗಿ ವಿಭಾಗ ಪ್ರತಿನಿಧಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದರಿಂದ ಅವರಿಗೆ ಈಗ ರಾಜ್ಯ ವ್ಯವಸ್ಥಾಪಕ ಸಮಿತಿಯ ಸಹ ಸದಸ್ಯ ಹುದ್ದೆ ಒಲಿದು ಬಂದಿದೆ.
ಕಮಠಾಣೆ ಅವರು ವಿ.ಕೆ. ಇಂಟರ್‍ನ್ಯಾಷನಲ್ ಶಿಕ್ಷಣ ಸಂಸ್ಥೆಗಳ ಸಮೂಹ ಹಾಗೂ ಶ್ರೀಮತಿ ಲಕ್ಷ್ಮಿಬಾಯಿ ಕಮಠಾಣೆ ಶಿಕ್ಷಣ ಸಂಸ್ಥೆಗಳ ಸಮೂಹದ ಮುಖ್ಯಸ್ಥರಾಗಿದ್ದಾರೆ.