ನಾಗಮಾರಪಳ್ಳಿ ಆಸ್ಪತ್ರೆಯಿಂದ ಆರೋಗ್ಯ ತಪಾಸಣೆ

Khed
Published on

ಕಮಲನಗರ: ಖೇಡ ಗ್ರಾಮದಲ್ಲಿ ಶ್ರೀ ಸೋಮಲಿಂಗೇಶ್ವರ ಜಪಯಜ್ಞ ಮತ್ತು ಶ್ರೀ ರೇವಪ್ಪಯ್ಯ ಶರಣರ ಬಿನ್ನಹ ಕಾರ್ಯಕ್ರಮ ನಿಮಿತ್ತ ಬೀದರ್ನ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತ ತಪಾಸಣಾ ಶಿಬಿರ ಜರುಗಿತು.

ಆಸ್ಪತ್ರೆಯ ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸಿದರು. ಸುಮಾರು 200ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ಮಾಡಿ, ಸೂಕ್ತ ಸಲಹೆ, ಮಾರ್ಗದರ್ಶನ ನೀಡಲಾಯಿತು. 160 ಜನರ ರಕ್ತ ಪರೀಕ್ಷೆ ಮಾಡಲಾಯಿತು.

ಗ್ರಾಮೀಣ ಭಾಗದಲ್ಲಿ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿದ ನಾಗಮಾರಪಳ್ಳಿ ಆಸ್ಪತ್ರೆಯ ಕಾರ್ಯವನ್ನು ಜನ ಕೊಂಡಾಡಿದರು. ಗ್ರಾಮೀಣ ಪ್ರದೇಶಕ್ಕೂ ಶಿಬಿರಗಳ ಮೂಲಕ ಆರೋಗ್ಯ ಸೇವೆ ವಿಸ್ತರಿಸಿರುವುದು ಅನುಕರಣೀಯ ಎಂದು ಶ್ಲಾಘಿಸಿದರು.

ಶ್ರೀ ರಾಜೇಶ್ವರ ಶಿವಾಚಾರ್ಯ, ಶ್ರೀ ಗುರುಬಸವ ಪಟ್ಟದ್ದೇವರು, ಪ್ರಮುಖರಾದ ಕಲ್ಲಪ್ಪ ದಾನಾ, ಪಿಂಟು ಪಾಟೀಲ್, ಸಂತೋಷ ದಾನಾ, ಚೇತನ ದಾನಾ, ಅಮರ, ಮಹಾದೇವ ಬೋರಲೆ, ಹನುಮಂತ ದಾನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net