ಅನಧಿಕೃತ ಮಾಂಸದಂಗಡಿ ತೆರವುಗೊಳಿಸಿ

Kamthan
Published on

ಬೀದರ್: ಗ್ರಾಮದಲ್ಲಿರುವ ಅನಧಿಕೃತ ಮಾಂಸ ಮಾರಾಟದ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.

ಕಮಠಾಣ ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಸಹಯೋಗದಡಿ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಇಲ್ಲಿನ ಮುಖ್ಯ ರಸ್ತೆಯಲ್ಲಿ ಅನಧಿಕೃತವಾಗಿ ಮಾಂಸದ ಅಂಗಡಿ ನಡೆಸುತ್ತಿದ್ದು, ಬಂದ್ ಮಾಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗೋಹತ್ಯೆ ನಿಷೇಧ ಕಾಯ್ದೆ ಪ್ರಕಾರ ಅಕ್ರಮ ಕಂಡುಬಂದರೆ ಪೊಲೀಸ್ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಎಲ್ಲ ಸಮಾಜದ ಮುಖಂಡರು, ಜನಸಾಮಾನ್ಯರು ಒಗ್ಗಟ್ಟಿನಿಂದ ಉತ್ತಮ ಜೀವನ ನಡೆಸಬೇಕು. ಗ್ರಾಮೀಣ ಜನರಿಗೆ ಮೂಲಸೌಲಭ್ಯ ಕಲ್ಪಿಸಲು ನಾನು ಬದ್ಧ. ಸಮಸ್ಯೆಗಳಿದ್ದರೆ ಕಚೇರಿಗೆ ಸಂಪರ್ಕಿಸಬೇಕು ಅಥವಾ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಡಿವೈಎಸ್ಪಿ ಶಿವನಗೌಡ ಪಾಟೀಲ್ ಮಾತನಾಡಿ, ಪ್ರತಿಯೊಬ್ಬರೂ ಶಾಂತಿ, ಸೌಹಾರ್ದದಿಂದ ಜೀವನ ಸಾಗಿಸಬೇಕು. ಅಪರಾಧ ಪ್ರಕರಣ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಚಿನ್ನಮ್ಮ ಶಿವರಾಜ, ತಾಪಂ ಇಒ ಮಾಣಿಕರಾವ ಪಾಟೀಲ್, ಸಿಪಿಐ ಮಹೇಶ ಪಾಟೀಲ್, ಪಿಡಿಒ ಕೃಷ್ಣ, ಪ್ರಮುಖರಾದ ಕುಶಾಲರಾವ ಯಾಬಾ, ನಾಗಭೂಷಣ ಕಮಠಾಣ, ಶಿವಕುಮಾರ ಸ್ವಾಮಿ, ಎಂ.ಡಿ. ಗೌಸೊದ್ದೀನ್, ಕರೀಮ್ ಸಾಬ್, ಇಸ್ಮಾಯಿಲ್ ಸಾಬ್, ಉಮೇಶ ಯಾಬಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net