ಜ್ಞಾನಸುಧಾಗೆ 15 ವೈದ್ಯಕೀಯ ಸೀಟು

Shreya Patil
Published on

ಬೀದರ್: ನಗರದ ಜ್ಞಾನಸುಧಾ ವಿಜ್ಞಾನ ಪಿಯು ಕಾಲೇಜು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಲ್ಲಿ ಉತ್ತಮ ಸಾಧನೆ ಮಾಡಿದ್ದು, 15 ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆಯಲಿದ್ದಾರೆ. ಶ್ರೇಯಾ ಉದಯ ಪಾಟೀಲ್ 540 ಅಂಕ, ಶ್ರೀಕಾಂತ ಬಾಪುರಾವ 521 ಅಂಕ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಡಾ.ಪೂರ್ಣಿಮಾ ಜಾಜ್೯, ನಿರ್ದೇಶಕ ಡಾ.ಮುನೇಶ್ವರ ಲಾಖಾ, ಪ್ರಾಂಶುಪಾಲ ಚನ್ನವೀರ ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net