

ಬೀದರ್: ಬಾವಗಿ ಗ್ರಾಮದ ಪವಾಡ ಪುರುಷ ಶ್ರೀ ಗುರು ಭದ್ರೇಶ್ವರ ಮಠದಲ್ಲಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು.
ಭದ್ರೇಶ್ವರ ಸಂಸ್ಥಾನದ ವೇದಮೂರ್ತಿ ಶಾಂತಕುಮಾರ ಸ್ವಾಮಿ ನೇತೃತ್ವದಲ್ಲಿ ಪೂಜೆ ಮಾಡಿ ಪ್ರಸಕ್ತ ವರ್ಷ ಉತ್ತಮ ಮಳೆ ಬೆಳೆಯಾಗಬೇಕು ಹಾಗೂ ಸರ್ವರ ಸಮೃದ್ಧಿಗಾಗಿ ದೇವರಲ್ಲಿ ಪ್ರಾರ್ಥಿಸಲಾಯಿತು. ಭದ್ರಯ್ಯ ಸ್ವಾಮಿ, ರುದ್ರಮುನಿ ದೇವರು, ಚನ್ನಮಲಪ್ಪ ಹಜ್ಜರ್ಗಿ, ಸಂತೋಷ ಜಗದಾಳೆ, ಶರಣಪ್ಪ ಮುದ್ದಾ, ರೇವಣಪ್ಪ ಭದ್ರಣ್ಣ, ರಾಚಪ್ಪ ಭಾಲ್ಕೆ, ರಾಜಕುಮಾರ ಮಡಿವಾಳ, ಬಸವರಾಜ ಖವದಿ, ನಾಗಶೆಟ್ಟಿ ಅಳ್ಳಿ, ಸಂಗಮೇಶ ಹಜ್ಜರ್ಗಿ, ಮಡೆಪ್ಪ ಹಜ್ಜರ್ಗಿ, ಜಗನ್ನಾಥ ಚಿದ್ರಿ, ಲೋಕೇಶ ಕನ್ನಶೆಟ್ಟಿ, ಸಿದ್ದಾರೂಢ ಭಾಲ್ಕೆ, ನಾಗೇಶ ಕೊಳಾರ್ ಇತರರಿದ್ದರು.