

ಚಿಟಗುಪ್ಪ: ಪುರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್ ನ ದಿಲೀಪಕುಮಾರ ಬಗದಲಕರ್, ಉಪಾಧ್ಯಕ್ಷರಾಗಿ ನಾಸಿರ್ ಖಾನ್ ಶಬ್ಬೀರ್ ಖಾನ್ ಆಯ್ಕೆಯಾಗಿದ್ದಾರೆ.
ಪುರಸಭೆಯಲ್ಲಿ ಬುಧವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣಾಧಿಕಾರಿ ಮಂಜುನಾಥ ಪಂಚಾಳ ಅವಿರೋಧ ಆಯ್ಕೆ ಘೋಷಿಸಿದರು.
23 ಸದಸ್ಯ ಬಲದ ಪುರಸಭೆಯಲ್ಲಿ 13 ಕಾಂಗ್ರೆಸ್, ಬಿಎಸ್ಪಿ, ಬಿಜೆಪಿಯ ತಲಾ ಒಬ್ಬ, ಮೂವರು ಜೆಡಿಎಸ್ ಸೇರಿ 18 ಸದಸ್ಯರು ಹಾಜರಿದ್ದರು. ಬಿಜೆಪಿಯ ಐವರು ಗೈರಾಗಿದ್ದಾರೆ. ಅವಿರೋಧ ಆಯ್ಕೆ ಘೋಷಣೆ ಆಗುತ್ತಿದಂತೆ ಮಾಜಿ ಸಚಿವ ರಾಜಶೇಖರ ಪಾಟೀಲ್ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಿಹಿ ತಿನ್ನಿಸಿ ಅಭಿನಂದಿಸಿದರು. ಮುಖ್ಯಾಕಾರಿ ಹುಸಾಮೊದ್ದೀನ್ ಬಾಬಾ, ಸಿಪಿಐ ಶ್ರೀನಿವಾಸ ಅಲ್ಲಾಪುರ, ಪಿಎಸ್ಐ ಬಾಷುಮಿಯಾ, ನಿಂಗಪ್ಪ ಮಣ್ಣೂರ ಇತರರಿದ್ದರು.