ಮಳೆಗಾಲ ಆರಂಭ ಸೂಚಿಸುವ ಹಬ್ಬ

bakchodi
Published on

ಬೀದರ್: ಮುಂಗಾರು ಆರಂಭದ ಮೊದಲ ಹಬ್ಬವಾದ ಕಾರ ಹುಣ್ಣಿಮೆಯಂದು ವರ್ಷಪೂರ್ತಿ ರೈತನೊಂದಿಗೆ ದುಡಿಯುವ ಎತ್ತುಗಳಿಗೆ ಪೂಜೆ ಸಲ್ಲಿಸುವ ಸಂಭ್ರಮದ ಹಬ್ಬ ಇದಾಗಿದೆ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.

ಬಕಚೌಡಿ ಗ್ರಾಮದಲ್ಲಿ ಹಬ್ಬದ ನಿಮಿತ್ತ ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕಾರಹುಣ್ಣಿಮೆ ರೈತ ಸಮುದಾಯಕ್ಕೆ ದೊಡ್ಡ ಹಬ್ಬ. ಈ ಹಬ್ಬ ಎತ್ತುಗಳ ಪ್ರಾಮುಖ್ಯ ತಿಳಿಸಿ ಮಳೆಗಾಲದ ಆರಂಭವನ್ನು ಸೂಚಿಸುತ್ತದೆ ಎಂದರು. ಮುಖಂಡರಾದ ನಾಗಭೂಷಣ ಕಮಠಾಣ, ಸುರೇಶ ಮಾಶೆಟ್ಟಿ, ಚಂದ್ರಯ್ಯ ಸ್ವಾಮಿ, ವಿಜಯಕುಮಾರ ಬಕಚೌಡಿ, ಅನೀಲ ಗುನ್ನಳ್ಳಿ, ನಾಗಶೆಟ್ಟಿ ಚಟ್ನಳ್ಳಿ, ಸಂಗಮೇಶ ಉದಗೀರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net