

ಬೀದರ್: ಝೀ ಕನ್ನಡದ ಪ್ರಸಿದ್ಧ ಸಂಗೀತ ರಿಯಾಲಿಟಿ ಶೋ ಸರಿಗಮಪ 2025ರ ಸ್ಪರ್ಧೆ ವಿಜೇತೆ ಶಿವಾನಿ ಸ್ವಾಮಿ ಬೀದರ್ ಮಾತ್ರವಲ್ಲ ಉತ್ತರ ಕರ್ನಾಟಕದ ಕೀರ್ತಿ ಹೆಚ್ಚಿಸಿರುವುದಕ್ಕೆ ಬ್ರಾಹ್ಮಣ ಮಹಾಸಂಘದ ಜಿಲ್ಲಾಧ್ಯಕ್ಷ ರಮೇಶ ಕುಲಕರ್ಣಿ ಸಂತಸ ವ್ಯಕ್ತಪಡಿಸಿದ್ದಾರೆ.
ಬಾಲ್ಯದಿಂದಲೇ ಸಂಗೀತದ ಪ್ರತಿ ನಿಷ್ಠೆ, ಶ್ರದ್ಧೆ ಮತ್ತು ತೀವ್ರ ಅಭಿಮಾನ ಹೊಂದಿದ ಶಿವಾನಿ, ಹಿಂದೂಸ್ಥಾನಿ ಶಾಸೀಯ ಸಂಗೀತದಲ್ಲಿ ಪರಿಣತಿ ಸಾಧಿಸಿರುವ ಈಕೆ ಮೊದಲ ಗುರು ಅವರ ತಂದೆ ಶಿವದಾಸ ಸ್ವಾಮಿ. ಮಗಳ ಪ್ರತಿಭೆ ಗುರುತಿಸಿ ತಮ್ಮ ಇಡೀ ಜೀವನವನ್ನು ಸಂಗೀತದ ಬೆಳವಣಿಗೆಗೆ ಸಮರ್ಪಿಸಿದ್ದ ಅವರ ಪರಿಶ್ರಮದ ಫಲವೇ ಈ ಮಹತ್ವದ ಜಯ. ಭವಿಷ್ಯದಲ್ಲಿ ಕನ್ನಡ ಜತೆಗೆ ಭಾರತದ ಇತರ ಭಾಷೆ ಚಲನಚಿತ್ರ ರಂಗದಲ್ಲೂ ಪ್ಲೇಬ್ಯಾಕ್ ಸಿಂಗರ್ ಆಗಿ ಹೊರಹೊಮ್ಮಲಿ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಂಗೀತ ವೇದಿಕೆಗಳಲ್ಲಿಯೂ ತನ್ನ ಸುಮಧುರ ಕಂಠದಿಂದ ಗಮನ ಸೆಳೆಯಲಿ ಎಂದು ಅವರು ಪ್ರಕಟಣೆಯಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.