ನಾಗರಿಕ ಹಕ್ಕು ರಕ್ಷಣಾ ದಿನ 9ಕ್ಕೆ

Ramesh Dakulgi
Published on

ಬೀದರ್: ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಪ್ರೊ.ಬಿ.ಕೃಷ್ಣಪ್ಪ ಅವರ 88ನೇ ಜನ್ಮ ದಿನದ ನಿಮಿತ್ತ ನಾಗರಿಕ ಹಕ್ಕು ರಕ್ಷಣಾ ದಿನ, ಅಂಬೇಡ್ಕರ್ ವಾದ ಮಾಸಪತ್ರಿಕೆ ವಿಶೇಷ ಸಂಚಿಕೆ ಮತ್ತು ದಾರ್ಶನಿಕ ನಮ್ಮ ಮಾರ್ಗದರ್ಶಕ ಪುಸ್ತಕ ಬಿಡುಗಡೆ ಕಾರ್ಯಕ್ರಮ ಜೂ.9ರಂದು ಬೆಂಗಳೂರಿನ ಅರಮನೆ ಮೈದಾನದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ ತಿಳಿಸಿದ್ದಾರೆ.

ಸಚಿವ ಡಾ.ಎಚ್.ಸಿ. ಮಹಾದೇವಪ್ಪ ಉದ್ಘಾಟಿಸುವರು. ಸಚಿವ ಸತೀಶ್ ಜಾರಕಿಹೊಳಿ, ಇಂದಿರಾ ಕೃಷ್ಣಪ್ಪ ಇತರರು ಪಾಲ್ಗೊಳ್ಳುವರು. ಮಾವಳ್ಳಿ ಶಂಕರ ಅದ್ಯಕ್ಷತೆ ವಹಿಸುವರು. ಸಮಿತಿಯ ಜಿಲ್ಲಾ, ತಾಲೂಕು ಘಟಕದ ಪದಾಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net