ಸಿಬಿಎಸ್‍ಇ ಶಾಲೆಗೆ ಏಕರೂಪ ಶುಲ್ಕ ನಿಗದಿಗೆ ಘೋಡೆ ಒತ್ತಾಯ

Jonson Ghoode
Published on

ಬೀದರ್: ರಾಷ್ಟ್ರದಾದ್ಯಂತ ಸಿ.ಬಿ.ಎಸ್.ಇ. ಶಾಲೆಗಳಿಗೆ ಏಕರೂಪದ ಶುಲ್ಕ ನಿಗದಿಪಡಿಸಬೇಕು ಎಂದು ಕಾಂಗ್ರೆಸ್ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಜಾನಸನ್ ಘೋಡೆ ಬೇಡಿಕೆ ಮಂಡಿಸಿದ್ದಾರೆ.

ಈ ಕುರಿತು ಅವರು ನವದೆಹಲಿಯಲ್ಲಿ ರಾಷ್ಟ್ರಪತಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಸಿ.ಬಿ.ಎಸ್.ಇ. ಶಾಲೆಗಳು ಡೊನೆಷನ್ ಹಾಗೂ ಕಟ್ಟಡ ನಿಧಿ ಹೆಸರಲ್ಲಿ ಪಾಲಕರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.

ದುಬಾರಿ ಶುಲ್ಕದ ಕಾರಣ ಬಡ ಪ್ರತಿಭಾವಂತ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಪರಿಸ್ಥಿತಿ ಎದುರಾಗಿದೆ. ಬಡ ಪಾಲಕರು ಹಾಗೂ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಏಕರೂಪದ ಶುಲ್ಕ ನಿಗದಿಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net