ಕನ್ನಡ ಜನ ಜಾಗೃತಿ ಸಮಿತಿ ಸಭೆ ಜೂ.2ರಂದು

Suresh Chanshetty
Published on

ಬೀದರ್: ಇಲ್ಲಿಯ ಚಿಕ್ಕಪೇಟೆ ರಸ್ತೆಯಲ್ಲಿ ಇರುವ ಜಿಲ್ಲಾ ಕನ್ನಡ ಭವನದಲ್ಲಿ ಜೂನ್ 2 ರಂದು ಬೆಳಿಗ್ಗೆ 11ಕ್ಕೆ ಕನ್ನಡ ಜನ ಜಾಗೃತಿ ಸಮಿತಿಯ ಜಿಲ್ಲಾ ಘಟಕದ ಸಭೆ ಕರೆಯಲಾಗಿದೆ.

'ಕನ್ನಡ ಶಾಲೆ ಉಳಿಸಿ, ಕರ್ನಾಟಕ ಉಳಿಸಿ' ಶೀರ್ಷಿಕೆಯಡಿ ಕನ್ನಡದ ಕುರಿತು ಚಿಂತನ- ಮಂಥನ ನಡೆಯಲಿದೆ.

ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕನ್ನಡಾಭಿಮಾನಿಗಳು ಸಭೆಯಲ್ಲಿ ಪಾಲ್ಗೊಂಡು ಕನ್ನಡದ ಬೆಳವಣಿಗೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ನೀಡಬೇಕು ಎಂದು ಕನ್ನಡ ಜನ ಜಾಗೃತಿ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹಾಗೂ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net