ಶಾಸಕ ಪ್ರಭು ಚವ್ಹಾಣ್ ಅಸ್ವಸ್ಥ

Prabhu Chavan
Published on

ಔರಾದ್ (ಬೀದರ್): ಆಪರೇಷನ್ ಸಿಂದೂರ ಯಶಸ್ಸು ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಆಯೋಜಿಸಿದ ತಿರಂಗಾ ಯಾತ್ರೆ ವೇಳೆ ಶಾಸಕ ಪ್ರಭು ಚವ್ಹಾಣ್ ಅಸ್ವಸ್ಥರಾದ ಘಟನೆ ಸೋಮವಾರ ನಡೆದಿದೆ.

ಪ್ರವಾಸಿ ಮಂದಿರದಿಂದ ಆರಂಭವಾದ ಯಾತ್ರೆ ಎಪಿಎಂಸಿ ವೃತ್ತಕ್ಕೆ ತಲುಪಿ ಸಮಾವೇಶಗೊಂಡಿತು. ಪೂಜ್ಯರು ಮಾತನಾಡುವ ವೇಳೆ ಶಾಸಕ ಚವ್ಹಾಣ್ ನಿಶಕ್ತರಾದರು. ತಕ್ಷಣ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಚಿಕಿತ್ಸೆ ನೀಡಿದ ನಂತರ ಕೆಲಕಾಲ ವಿಶ್ರಾಂತಿ ಪಡೆದು ಚವ್ಹಾಣ್ ಸ್ವಗ್ರಾಮ ಬೊಂತಿಗೆ ತೆರಳಿದರು. ಯಾತ್ರೆಯಲ್ಲಿ ಚವ್ಹಾಣ್ ಕುಣಿದು ದಣಿದಿದ್ದಾರೆ. ಹೀಗಾಗಿ ಸುಸ್ತಾಗಿ ತಲೆ ಸುತ್ತಿದೆ. ಬೇರೆ ಯಾವ ಸಮಸ್ಯೆ ಇಲ್ಲ ಎಂದು ಆಪ್ತರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net