ಗಡಿಕುಶನೂರದಲ್ಲಿ ಬಸವ ಜಯಂತ್ಯುತ್ಸವ 25ರಂದು

Basavanna-2 (1)
Published on

ಔರಾದ್: ತಾಲ್ಲೂಕಿನ ಗಡಿಕುಶನೂರ ಗ್ರಾಮದಲ್ಲಿ ಬಸವ ಮಂಟಪ ಸೇವಾ ಸಮಿತಿ ವತಿಯಿಂದ ಮೇ 25 ರಂದು ಕರ್ನಾಟಕದ ಸಾಂಸ್ಕøತಿಕ ನಾಯಕ ಬಸವಣ್ಣನವರ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ.

ಜಯಂತ್ಯುತ್ಸವ ಪ್ರಯುಕ್ತ ಬೆಳಿಗ್ಗೆ 9ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಲಿದೆ. ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಲಿವೆ.

ಬಸವ ಮಂಟಪದಲ್ಲಿ ಮಧ್ಯಾಹ್ನ 1ಕ್ಕೆ ನಡೆಯುವ ಮೊದಲ ಗೋಷ್ಠಿಯನ್ನು ಶಾಸಕ ಪ್ರಭು ಚವಾಣ್ ಉದ್ಘಾಟಿಸುವರು. ಸಂಜೆ 6ಕ್ಕೆ ಜರುಗುವ ಎರಡನೇ ಗೋಷ್ಠಿಯನ್ನು ಸಂಸದ ಸಾಗರ್ ಖಂಡ್ರೆ ಉದ್ಘಾಟಿಸುವರು.

ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಡಾ. ಗಂಗಾದೇವಿ, ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು, ಗುರುಬಸವ ದೇವರು ಸಾನಿಧ್ಯ ವಹಿಸುವರು.

ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಜೈರಾಜ ಖಂಡ್ರೆ ಷಟ್‍ಸ್ಥಲ ಧ್ವಜಾರೋಹಣ ಮಾಡುವರು. ಉದ್ಯಮಿ ವೀರಶೆಟ್ಟಿ ತೇಗಂಪುರ, ಮಹಮ್ಮದ್ ವಲಿಯೊದ್ದಿನ್, ಕಂಟೆಪ್ಪ ಗಂದಿಗುಡೆ, ವಿಜಯಕುಮಾರ ಪಟ್ನೆ, ಚಂದ್ರಕಾಂತ ಪಟ್ನೆ ಉಪಸ್ಥಿತರಿರುವರು.

ಕಾರ್ಯಕ್ರಮದಲ್ಲಿ ವಚನ ನೃತ್ಯ, ರೂಪಕ ಪ್ರದರ್ಶನಗೊಳ್ಳಲಿವೆ. ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ನಡೆಯಲಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿಯ ಸಂಚಾಲಕ ಹನುಮಂತರಾವ್ ಪಾಟೀಲ ಹಾಗೂ ಅಶೋಕ ಮಾಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net