

ಬೀದರ್: ಪಾಕಿಸ್ತಾನ ನಿರಂತರವಾಗಿ ಭಯೋತ್ಪಾದಕರ ಮೂಲಕ ಭಾರತದಲ್ಲಿ ವಿಧ್ವಂಸಕ ಕೃತ್ಯಗಳು ನಡೆಸುತ್ತಿದೆ. ದೇಶದೊಳಗೆ ಅತಿಕ್ರಮ ಪ್ರವೇಶ ಮಾಡುತ್ತಿದೆ. ಈ ಹಿಂದೆ ಭಾರತದೊಂದಿಗೆ ಮಾಡಿದ ನಾಲ್ಕು ಯುದ್ಧದಲ್ಲಿ ಪಾಕ್ ಹೀನಾಯ ಸೋಲು ಕಂಡಿದೆ. ಆದರೂ ಪಾಠ ಕಲಿಯದೆ ಭಂಡತನ ಪ್ರದರ್ಶಿಸುತ್ತಿದೆ. ಆರ್ಥಿಕವಾಗಿ ದಿವಾಳಿಯಾಗಿ ಕಂಗಾಲಾದ ಪಾಕಿಸ್ತಾನಕ್ಕೆ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಭಾರತ ಈ ಬಾರಿ ಮಣ್ಣು ಮುಕ್ಕಿಸಿದೆ ಎಂದು ವ್ಯಾಪಾರಿ ಹಣಮಂತ ಬುಳ್ಳಾ ತಿಳಿಸಿದ್ದಾರೆ.