

ಬೀದರ್: ಪಹಲ್ಗಾಮ್ನಲ್ಲಿ ಪ್ರವಾಸಿಗರು ಹುತಾತ್ಮರಾದ ನೋವು, ದುಃಖವನ್ನು ಅನುಭವಿಸಿದ್ದ ಪ್ರತಿಯೋರ್ವ ಭಾರತೀಯನಿಗೆ ಬುಧವಾರ ಬೆಳಗ್ಗೆ ನೆಮ್ಮದಿ ಉಂಟಾಗಿದೆ ಎಂದು ಭಾರತೀಯ ಗೋ ಪರಿವಾರ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ತಿಳಿಸಿದ್ದಾರೆ.
ಮಾರಕ ವೈಮಾನಿಕ ದಾಳಿ ನಡೆಸಿರುವ ನಮ್ಮ ವಾಯುಪಡೆಗೆ ಸಲಾಂ. ಭಾರತೀಯ ಸೇನೆ ವಿಶ್ವ ಮಟ್ಟದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೃಢ ಸಂಕಲ್ಪದ ನಾಯಕತ್ವದಲ್ಲಿ ಜನರಿಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.