

ಬೀದರ್: ಭಾರತೀಯ ವಾಯು ಸೇನೆಯಿಂದ ಪಾಕಿಸ್ತಾನ ಉಗ್ರರ ಮೇಲೆ ದಾಳಿ ನಡೆಸಿದ್ದು, ಪಹಲ್ಗಾಮ್ನಲ್ಲಿ ನಡೆದ ಪ್ರವಾಸಿಗರ ಬಲಿದಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ ಹೇಳಿದ್ದಾರೆ.
ಇದೊಂದು ಶ್ಲಾಘನೀಯ ಕೆಲಸವಾಗಿದೆ. ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ದೊಡ್ಡ ಎಚ್ಚರಿಕೆ ಪಾಠ ಕಲಿಸಿದ್ದಾರೆ. ವಾಯುಸೇನೆಯ ಈ ಕೆಲಸಕ್ಕೆ ಅಭಿನಂದನೆ ಎಂದು ತಿಳಿಸಿದ್ದಾರೆ.