

ಬೀದರ್: ಇಡೀ ದೇಶವೇ ಇಂತಹದ್ದೊಂದು ಕಾರ್ಯಾಚರಣೆ ಬಯಸಿತ್ತು, ದೇಶಕ್ಕೆ ಶುಭ ಸುದ್ದಿಯೇ ಸಿಕ್ಕಿದೆ. ಪಹಲ್ಗಾಮ್ ನಂಥ ದಾಳಿ ನಡೆಸುವ ಮುನ್ನ ಉಗ್ರರು ಹತ್ತು ಬಾರಿ ಯೋಚನೆ ಮಾಡಬೇಕಾಗಿದೆ. ನಮ್ಮ ಯೋಧರು ವಾಯುದಾಳಿ ಮಾಡುವ ಮೂಲಕ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಯಾವ ಮಟ್ಟಕ್ಕೂ ಹೋಗಬಹುದು ಎನ್ನುವ ಸಂದೇಶವನ್ನು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಧನ್ನೂರ (ಆರ್) ಗ್ರಾಪಂ ಸದಸ್ಯ, ಮಾಜಿ ಅಧ್ಯಕ್ಷ ರಾಚಣ್ಣಾ ಸಾಹು ತಿಳಿಸಿದ್ದಾರೆ.