

ಬೀದರ್: ರಾಜ್ಯ ಸರ್ಕಾರ ಜಾತಿ ಜನಗಣತಿ ಮಾಡಲು ಮುಂದಾಗಿರುವುದು ಸ್ವಾಗತಾರ್ಹ ಕ್ರಮ. ಸಮೀಕ್ಷೆ ವೇಳೆ ನಿಖರ ಮಾಹಿತಿಯನ್ನು ನೀಡಬೇಕು ಎಂದು ಜಿಲ್ಲಾ ಬಂಜಾರಾ ಸಮಾಜದ ಅಧ್ಯಕ್ಷ ಬಸವರಾಜ ಪವಾರ್ ತಿಳಿಸಿದ್ದಾರೆ.
ಸ್ವಾತಂತ್ರ ದೊರಕಿದಾಗಿನಿಂದ ನಮ್ಮ ಸಮಾಜದ ಸಮೀಕ್ಷೆ ನಡೆದಿಲ್ಲ. ಸೂಕ್ತ ದಾಖಲೆ ಸಹ ಹೊಂದಿರುವುದಿಲ್ಲ. ಅಂಕೆ ಸಂಖ್ಯೆ ಇಲ್ಲದ ಮೌಖಿಕ ವರದಿಯನ್ನು ಹೇಳಲಾಗುತ್ತಿತ್ತು. ಆರ್ಥಿಕ ಸ್ಥಿತಿಗತಿ, ಶಿಕ್ಷಣದ ಕುರಿತು ಸೂಕ್ತ ಮಾಹಿತಿ ಇರದ ಕಾರಣ ಸರ್ಕಾರದ ಸೌಲಭ್ಯ ಬಂಜಾರಾ (ಲಂಬಾಣಿ) ಸಮಾಜಕ್ಕೆ ಸಿಗುತ್ತಿದ್ದಿಲ್ಲ. ಈಗ ಕಾಲಕೂಡಿ ಬಂದಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ. ಸಮೀಕ್ಷೆಯಲ್ಲಿ ಜಾತಿ ಮತ್ತು ಕುಟುಂಬಕ್ಕೆ ಸಂಬಂಸಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮಾಹಿತಿಗಳನ್ನು ಸಮೀಕ್ಷೆದಾರರಿಗೆ ನೀಡಬೇಕು. ಬಂಜಾರ ಸಮಾಜ ಮೀಸಲಾತಿ ಲಾಭ ಪಡೆದುಕೊಳ್ಳಲು ಈ ಸಮೀಕ್ಷೆ ಸಹಕಾರಿಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.