ಸೂರ್ಯೋದಯ ಶಾಲೆ ವಿದ್ಯಾರ್ಥಿನಿ ರಾಜ್ಯಕ್ಕೆ ಐದನೇ ರ್ಯಾಂಕ್

Bhalki Suryodaya School - 8
Published on

ಬೀದರ್: ಭಾಲ್ಕಿಯ ಸುರ್ಯೋದಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ದೇವಿ ಮಲ್ಲಿಕಾರ್ಜುನ ಪ್ರಸಕ್ತ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ರ್ಯಾಂಕ್ ಗಳಿಸಿ ಅಮೋಘ ಸಾಧನೆ ಮಾಡಿದ್ದಾರೆ.

ದೇವಿ ಗಣಿತ, ಕನ್ನಡ, ಸಮಾಜ ವಿಜ್ಞಾನದಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾರೆ. ಇಂಗ್ಲಿಷ್‍ನಲ್ಲಿ 124, ವಿಜ್ಞಾನದಲ್ಲಿ 99 ಹಾಗೂ ಹಿಂದಿಯಲ್ಲಿ 98 ಅಂಕ ಗಳಿಸಿದ್ದಾರೆ. ಅವರ ಫಲಿತಾಂಶ ಶೇ 99.36 ರಷ್ಟು ಆಗಿದೆ.

ಶಾಲೆಯ ಕೇಶವ ಓಂಕಾರ ಶೇ 98.08, ಆದರ್ಶ್ ಶೇ 97.28, ಮಹೇಶ್ವರಿ ಶೇ 97.28, ಶ್ರೀವೇಧಾಂತ್ ಶೇ 96.96, ಎಂ.ಡಿ. ಅರ್ಷಲಾನ್ ಶೇ 96, ನಂದಿನಿ ಶೇ 95.36, ವರ್ಷಾ ಶೇ 94.72, ವೈಷ್ಣವಿ ಶೇ 94.72, ವೈಷ್ಣವಿ ಶೇ 94.72,  ಉದಯ ಶೇ 94.4, ಉಮೈದ್ ಶೇ 94.24, ಅಭಿಷೇಕ ಶೇ 94.08, ಭಾಗ್ಯಶ್ರೀ ಶೇ 93.76, ಸುಮೀತ್ ಶೇ 92.48, ಗಣೇಶ ಶೇ 91.84, ಅನಿಕೇತ್ ಶೇ 91.68, ಪೃಥ್ವಿರಾಜ್ ಶೇ 91.2, ಕವಿರಾಜ ಶೇ 91.2 ಅಂಕ ಪಡೆದು ಗಮನ ಸೆಳೆದಿದ್ದಾರೆ.

ಪರೀಕ್ಷೆ ಬರೆದ ಶಾಲೆಯ 60 ವಿದ್ಯಾರ್ಥಿಗಳ ಪೈಕಿ 36 ಅಗ್ರಶ್ರೇಣಿ ಹಾಗೂ 21 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಶಾಲೆಯ ಅಧ್ಯಕ್ಷ ಸಂತೋಷ ಖಂಡ್ರೆ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂತೋಷ್ ಖಂಡ್ರೆ, ಶಾಲೆಯ ಕಾರ್ಯದರ್ಶಿ ಉಷಾ ಖಂಡ್ರೆ, ಪ್ರಾಚಾರ್ಯ ಅನಿಲ್ ಪಾಟೀಲ, ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

ಸನ್ಮಾನ: ರಾಜ್ಯಕ್ಕೆ ಐದನೇ ರ್ಯಾಂಕ್ ಗಳಿಸಿದ ವಿದ್ಯಾರ್ಥಿನಿ ದೇವಿ ಮಲ್ಲಿಕಾರ್ಜುನ ಅವರನ್ನು ಶಾಲೆ ವತಿಯಿಂದ ಭಾಲ್ಕಿಯಲ್ಲಿ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net