ಬೀದರ್: ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಸನ್ಮುಕಯ್ಯ ಮರಕುಂದಾ ಆಯ್ಕೆಯಾಗಿದ್ದಾರೆ.
ನಗರದ ಸಂಘದ ಕಚೇರಿಯಲ್ಲಿ 2025-26ನೇ ಸಾಲಿನ ಅವಧಿಗೆ ನಡೆದ ಚುನಾವಣೆಯಲ್ಲಿ ಅವರು ಆಯ್ಕೆಯಾದರು.
ನೂತನ ಪದಾಧಿಕಾರಿಗಳ ಹೆಸರು ಹೀಗಿವೆ. ಶಿವಕುಮಾರ ಮಾಲಿಪಾಟೀಲ (ಉಪಾಧ್ಯಕ್ಷ), ಧನರಾಜ ಬಿರಾದಾರ (ಪ್ರಧಾನ ಕಾರ್ಯದರ್ಶಿ), ಬಜರಂಗ ಕಾಶೆಂಪುರ (ಜಂಟಿ ಕಾರ್ಯದರ್ಶಿ) ಮತ್ತು ಜಯಶ್ರೀ ಪಾಟೀಲ (ಖಜಾಂಚಿ). ಚುನಾವಣಾ ಅಧಿಕಾರಿಯಾಗಿದ್ದ ಉಮಾಶಂಕರ ಜವಳೆ ಆಯ್ಕೆಯನ್ನು ಪ್ರಕಟಿಸಿದರು.
ಸಂಘದ ನಿರ್ಗಮಿತ ಅಧ್ಯಕ್ಷ ಶಿವಶರಣಪ್ಪ(ಪುಟ್ಟು) ಪಾಟೀಲ ನೂತನ ಪದಾಧಿಕಾರಿಗಳನ್ನು ಶಾಲು ಹೊದಿಸಿ ಸನ್ಮಾನಿಸಿದರು.