

ಬೀದರ್: ತಾಲ್ಲೂಕಿನ ಹಮಿಲಾಪುರದಲ್ಲಿ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಮಹಿಳಾ ಸ್ವ ಸಹಾಯ ಸಂಘದಿಂದ ಸಾಮ್ರಾಟ್ ಅಶೋಕ ಸ್ತೂಪ ನಿರ್ಮಾಣಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಸಂಘದಿಂದ 22 ಅಡಿ ಎತ್ತರದ ಸುಂದರ ಸ್ತೂಪ ನಿರ್ಮಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷೆ ಈರಮ್ಮ ರಾಂಪುರೆ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಎಂ.ಎಸ್. ಮನೋಹರ, ವಿ.ಎಂ. ರಾಂಪುರೆ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಮಹೇಶ ರಾಂಪುರೆ, ಘಾಳೆಮ್ಮ ರಾಂಪುರೆ, ಶ್ರೀದೇವಿ, ಕಸ್ತೂರಿ ಭೋಸ್ಲೆ, ಲಲಿತಮ್ಮ, ಲಕ್ಷ್ಮಿ ರಾಂಪುರೆ, ಶಾರದಾಬಾಯಿ ರಾಂಪುರೆ, ಶೋಭಿತ್, ಪ್ರಕಾಶ ರಾಂಪುರೆ, ಗೌತಮ, ಮಂಜುನಾಥ, ನರಸಿಂಗ್ ಭೋಸ್ಲೆ, ಅಶೋಕ್ ಶರ್ಮಾ, ರವಿ ಭೋಸ್ಲೆ, ಕಿಶೋರ ರಾಂಪುರೆ, ಸತೀಶ, ಸುನಿಲ್ ರಾಂಪುರೆ, ಮತ್ತಿತರರು ಇದ್ದರು.