ಸರಾಸರಿ ಅಂಕಕ್ಕೆ ವಿದ್ಯಾರ್ಥಿ ಕುಲಕರ್ಣಿ ಒಪ್ಪಿಗೆ

suchivrat kulkarni
Published on

ಬೀದರ್: ಜನಿವಾರ ಧರಿಸಿದ್ದಕ್ಕೆ ಕೆ-ಸಿಇಟಿ ಪರೀಕ್ಷೆಯಿಂದ ವಂಚಿತಗೊಂಡಿದ್ದ ವಿದ್ಯಾರ್ಥಿ ಸುಚಿವೃತ್ ಕುಲಕರ್ಣಿ ಸಮಸ್ಯೆ ಇತ್ಯರ್ಥವಾದಂತಾಗಿದೆ.

ಸಿಇಟಿ ಮರುಪರೀಕ್ಷೆ ಬರೆಯುವುದು ಅಥವಾ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯದ ಸರಾಸರಿ ಅಂಕಗಳ ಆಧಾರವಾಗಿ ಪರಿಗಣಿಸಿ ಗಣಿತಕ್ಕೆ ಅಂಕ ನೀಡುವಂಥ ಎರಡು ಪ್ರಸ್ತಾವಗಳನ್ನು ಸರ್ಕಾರ ವಿದ್ಯಾರ್ಥಿ ಮುಂದಿಟ್ಟಿತ್ತು. ಈಗಾಗಲೇ ಪರೀಕ್ಷೆ ಬರೆದ ಎರಡು ವಿಷಯದ ಸರಾಸರಿ ಅಂಕ ನೀಡುವ ಪ್ರಸ್ತಾವಕ್ಕೆ ವಿದ್ಯಾರ್ಥಿ ಸುಚಿವೃತ್ ಒಪ್ಪಿದ್ದು, ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೃತ್ತಪರ ಕೋಸ್೯ ಗಳಿಗಾಗಿ ಏ.17ರಂದು ನಡೆಸಿದ ಸಿಇಟಿ ಪರೀಕ್ಷೆ ವೇಳೆ ನಗರದ ಸಾಯಿಸ್ಫೂರ್ತಿ ಕಾಲೇಜು ಕೇಂದ್ರದಲ್ಲಿ ಜನಿವಾರ ತೆಗೆಯಲು ಕುಲಕರ್ಣಿ ಗೆ ಅಲ್ಲಿನ ಸಿಬ್ಬಂದಿ ಸೂಚಿಸಿದ್ದರು. ಇದಕ್ಕೊಪ್ಪದ ಕಾರಣ ಪರೀಕ್ಷೆಗೆ ನಿರಾಕರಿಸಲಾಗಿತ್ತು. ಸಿಬ್ಬಂದಿ ವರ್ತನೆಗೆ ಬ್ರಾಹ್ಮಣ ಸಮಾಜದಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ಪರೀಕ್ಷಾ ಕೇಂದ್ರದ ಇಬ್ಬರು ನೌಕರರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net