

ಬೀದರ್: ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರನ್ನು ಬೆಂಗಳೂರಿನ ಸುಮಂಗಲಿ ಸೇವಾ ಆಶ್ರಮದ ಪ್ರಸಕ್ತ ಸಾಲಿನ ಅಣ್ಣ ಬಸವಣ್ಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬೆಂಗಳೂರಿನ ಆರ್.ಟಿ. ನಗರದ ಚೋಳನಾಯಕನಹಳ್ಳಿಯ ಆಶ್ರಮದಲ್ಲಿ ಏಪ್ರಿಲ್ 30 ರಂದು ನಡೆಯಲಿರುವ ಬಸವ ಜಯಂತಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.
ಡಾ. ಬಸವಲಿಂಗ ಅವಧೂತರು ಮೂರು ದಶಕಗಳಿಂದ ಸಮಾಜೋಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಭೆ, ಸಮಾರಂಭ, ಪ್ರವಚನ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಆಧಾತ್ಮಿಕ ಜಾಗೃತಿ ಮೂಡಿಸುತ್ತಿದ್ದಾರೆ.
ಅವಧೂತರಿಗೆ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ಅಪಾರ ಭಕ್ತರು ಇದ್ದಾರೆ.
ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಾಗಿ ಸುಮಂಗಲಿ ಆಶ್ರಮ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಡಾ. ಬಸವಲಿಂಗ ಅವಧೂತರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಪ್ರಮುಖರಾದ ಡಾ. ಬಸವರಾಜ ಬಲ್ಲೂರ, ಸಿದ್ದಾರೆಡ್ಡಿ ನಾಗೋರಾ, ದೇವೇಂದ್ರ ಕರಂಜೆ, ಟಿ.ಎಂ. ಮಚ್ಚೆ, ಬಂಡಯ್ಯ ಸ್ವಾಮಿ, ಹಣಮಂತ ಪಾಟೀಲ ಚಿಟ್ಟಾ, ವೀರಶೆಟ್ಟಿ, ಚನಶೆಟ್ಟಿ, ಸಿದ್ಧಾರೂಢ ಭಾಲ್ಕೆ, ಅಶೋಕ ದಿಡಗೆ, ಶಿವಕುಮಾರ ಮೂಲಗೆ, ನಾಗೇಶ ಪಾಟೀಲ, ತುಕಾರಾಮ ಮೇತ್ರೆ, ಸಂಜುಕುಮಾರ ಬುಕ್ಕಾ, ಸುನೀಲ್ ರಾಠೋಡ್, ಜಗನ್ನಾಥ ಕೊಳಾರೆ, ಶಿವಕುಮಾರ ಪಟಪಳ್ಳಿ, ಜಗನ್ನಾಥ ಕಮಲಾಪುರೆ, ಸಂಗೀತಾ ಘಂಟೆ, ಈಶ್ವರಮ್ಮ ಪಾಟೀಲ ಮತ್ತಿತರರು ಸಂತಸ ವ್ಯಕ್ತಪಡಿಸಿದ್ದಾರೆ.