ಉಗ್ರರ ದುಷ್ಕೃತ್ಯಕ್ಕೆ ತೀವ್ರ ಖಂಡನೆ

Venkatesh Kulkarni Humnabad - Copy
????????????
Published on

ಬೀದರ್: ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಕಣಿವೆಯಲ್ಲಿ ಉಗ್ರರು ನಡೆಸಿದ ಘೋರ ದುಷ್ಕೃತ್ಯವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್ ಕುಲಕರ್ಣಿ ತೀವ್ರವಾಗಿ ಖಂಡಿಸಿದ್ದಾರೆ.

ಉಗ್ರರು ಗುಂಡಿನ ಮಳೆಗರೆದು ಕರ್ನಾಟಕದ ಇಬ್ಬರು ಸೇರಿ 28 ಪ್ರವಾಸಿಗರನ್ನು ಹತ್ಯೆಗೈದಿರುವುದು ಅಕ್ಷಮ್ಯ ಹಾಗೂ ಅಮಾನವೀಯ ಎಂದು ಹೇಳಿದ್ದಾರೆ.

ಅಮಾಯಕರ ಮೇಲಿನ ಉಗ್ರರ ದಾಳಿಗೆ ದೇಶದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಕೇಂದ್ರ ಸರ್ಕಾರ ದಾಳಿಯಲ್ಲಿ ಭಾಗಿಯಾದವರನ್ನು ಸುಮ್ಮನೆ ಬಿಡಬಾರದು. ಉಗ್ರರನ್ನು ಮಟ್ಟ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಮಂಜುನಾಥರಾವ್ ಸೇರಿ ಇಬ್ಬರ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net