ಕಾರ್ಪೆಂಟರ್ ಯುನಿಯನ್ ಕಚೇರಿ ಉದ್ಘಾಟನೆ 23ರಂದು

Published on

ಬೀದರ್: ನಗರದ ಸಿ.ಎಂ.ಸಿ. ಕಾಲೊನಿಯ ಮೌನೇಶ್ವರ ದೇವಸ್ಥಾನ ಸಮೀಪ ಜಿಲ್ಲಾ ವಿಶ್ವಕರ್ಮ ಕಾರ್ಪೆಂಟರ್ ಯುನಿಯನ್ ನೂತನ ಕಚೇರಿ ಉದ್ಘಾಟನಾ ಸಮಾರಂಭ ಏಪ್ರಿಲ್ 23 ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸುವರು. ಪೌರಾಡಳಿತ ಸಚಿವ ರಹೀಂಖಾನ್ ಘನ ಉಪಸ್ಥಿತಿ ವಹಿಸುವರು. ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಉಮಾಕಾಂತ ನಾಗಮಾರಪಳ್ಳಿ, ನಗರಸಭೆ ಸದಸ್ಯರಾದ ರಾಜಾರಾಮ ಚಿಟ್ಟಾ, ಶಿವಕುಮಾರ ಭಾವಿಕಟ್ಟಿ, ಶಶಿಧರ ಹೊಸಳ್ಳಿ, ಸಂತೋಷಿ ಅರುಣಕುಮಾರ, ಗಾಂಧಿಗಂಜ್ ಠಾಣೆಯ ಸಿಪಿಐ ಆನಂದರಾವ್ ಎಸ್.ಎನ್., ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿಯ ಅಧ್ಯಕ್ಷ ಮಹೇಶ ಪಾಂಚಾಳ, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ ಮುಖ್ಯ ಅತಿಥಿಗಳಾಗಿ, ಅಶೋಕ ಉಪ್ಪೆ, ಅನಿಲಕುಮಾರ ಔರಾದೆ, ಅನಿಲ್ ಖೇಣಿ, ದಿಲೀಪ್ ನಿಟ್ಟೂರೆ, ವೀರಶೆಟ್ಟಿ ಮಣಗೆ, ಹಾವಶೆಟ್ಟಿ ಪಟೀಲ, ರಾಜಶೇಖರ ಕರ್ಪೂರ, ಸಂತೋಷ್ ಸುಂಕದ, ಓಂಕಾರ ಪಾಟೀಲ, ಮಹೇಶ ಬುರಂಡೆ, ಅಶೋಕ ಪಾಟೀಲ, ಮನೋಹರ ದೀಕ್ಷಿತ್, ರವಿ ಮೂಲಗೆ, ಮಂಜುನಾಥ ಹುಡಗೆ, ಶ್ರೀನಿವಾಸ್ ಸಾಳೆ, ವಸಂತ ಕುಲಕರ್ಣಿ, ಅನುಮೇಶ ಚಿದ್ರೆ, ಪ್ರಶಾಂತ ಶೇಂದ್ರೆ, ಸಂದೀಪ್ ಕಾಡವಾದೆ, ಶಾಂತಕುಮಾರ ಚಂದಾ, ಸುಧಾಕರ ಗರ್ಜೆ, ಮಹಾದೇವ ಜ್ಯೋತಿ, ಶರಣಬಸವೇಶ್ವರ, ಅಮರನಾಥ ರಂಜೇರಿ ಹಾಗೂ ಅಶೋಕ ಭೋಸ್ಲೆ ಪಾಲ್ಗೊಳ್ಳುವರು.

ಜಿಲ್ಲಾ ವಿಶ್ವಕರ್ಮ ಕಾರ್ಪೆಂಟರ್ ಯುನಿಯನ್ ಅಧ್ಯಕ್ಷ ಸುರೇಶ ವಿಶ್ವಕರ್ಮ ಕಣಜಿ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net