ಎಲ್ಲರ ವಿರುದ್ಧ ಕ್ರಮಕೈಗೊಳ್ಳಿ

aravindkumar arali
Published on

ಬೀದರ್: ಪತ್ರಕರ್ತ ರವಿ ಭೂಸಂಡೆ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿರುವ ಅರಣ್ಯ ಇಲಾಖೆಯ ವನಪಾಲಕ ದಸ್ತಗಿರಿ ಸಾಬ್ ಒಬ್ಬರನ್ನು ಅಮಾನತು ಮಾಡಿದರೆ ಸಾಲದು. ಘಟನೆಯಲ್ಲಿ ಭಾಗಿಯಾದ ಎಲ್ಲ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ ಆಗ್ರಹಿಸಿದ್ದಾರೆ.

ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಪತ್ರ ಬರೆದು, ಅರಣ್ಯ ಇಲಾಖೆ ನಾಲ್ವರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಇದು ಕೇವಲ ದೈಹಿಕ ಹಲ್ಲೆ ಅಲ್ಲ. ಜಾತಿ ಆಧರಿಸಿ ಅವಮಾನಿಸಿದ್ದಾರೆ. ಆರೋಪಿಗಳಲ್ಲಿ ಮುಸ್ಲಿಂ ಅಧಿಕಾರಿ ವಿರುದ್ಧ ಕ್ರಮಕೈಗೊಂಡು ಉಳಿದವರ ವಿರುದ್ಧ ಹಾಗೆಬಿಟ್ಟಿದ್ದು ತಾರತಮ್ಮ ಮಾಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ರೀತಿ ಮಾಡಿದರೆ ವ್ಯವಸ್ಥೆ ಮೇಲಿನ ನಂಬಿಕೆ ಹೋಗುತ್ತದೆ ಎಂದು ಹೇಳಿದ್ದಾರೆ.

ಜಾತಿ ನಿಂದನೆ ಪ್ರಕರಣ ದಾಖಲಾದರೂ ಎಲ್ಲರಿಗೆ ಜಾಮೀನು ಹೇಗೆ ಸಿಕ್ಕಿದೆ? ಇದರಿಂದ ಸರ್ಕಾರದ ಮೇಲೆ ಜನರಿಗೆ ವಿಶ್ವಾಸ ಕಳೆದು ಹೋಗುತ್ತದೆ. ಪತ್ರಕರ್ತರ ಸುರಕ್ಷತೆ ಹಾಗೂ ನ್ಯಾಯ ಅಗತ್ಯವಿದೆ. ಹೀಗಾಗಿ ಉಳಿದ ಆರೋಪಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net