ಕಾಂಗ್ರೆಸ್‌ಗೆ ಖಾಶೆಂಪುರ ನೇಮಕ

Sunilkumar khashempur
Published on

ಬೀದರ್: ಕರ್ನಾಟಕ ಪ್ರದೇಶ ಮೀನುಗಾರರ ಕಾಂಗ್ರೆಸ್ ಸಮಿತಿ ಬೀದರ್ ಜಿಲ್ಲಾ ಘಟಕ ಅಧ್ಯಕ್ಷರಾಗಿ ಸುನೀಲಕುಮಾರ ತುಕಾರಾಮ ಖಾಶೆಂಪುರ ಅವರನ್ನು ನೇಮಕ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಆದೇಶ, ಮಾಜಿ ಶಾಸಕ ಅಶೋಕ ಖೇಣಿ ಶಿಪಾರಸ್ಸು ಮೇರೆಗೆ ಈ ನೇಮಕ ಮಾಡಲಾಗಿದೆ.

ಶನಿವಾರ ನಗರದಲ್ಲಿ ಖೇಣಿ ಅವರು ಖಾಶೆಂಪುರಗೆ ನೇಮಕಾತಿ ಆದೇಶ ಪತ್ರ ನೀಡಿ ಸನ್ಮಾನಿಸಿದರು. ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾದ ಚಂದ್ರಶೇಖರ ಚನ್ನಶೆಟ್ಟಿ , ಕರೀಮ್ ಸಾಬ್ ಕಮಠಾಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net