ಜಗಜೀವನರಾಂ ಮೂರ್ತಿ ಸ್ಥಳಾಂತರಿಸಿ

Jonson Ghoode
Published on

ಬೀದರ್: ನಗರದ ನಯಾ ಕಮಾನ್ ಹತ್ತಿರ ಹೈದರಾಬಾದ್ ರಸ್ತೆಯಲ್ಲಿ ಇರುವ ಡಾ. ಬಾಬು ಜಗಜೀವನರಾಂ ಅವರ ಮೂರ್ತಿಯನ್ನು ಕೂಡಲೇ ಬೇರೆಡೆ ಸ್ಥಳಾಂತರಿಸಬೇಕು ಎಂದು ದಲಿತ ಮುಖಂಡ ಜಾನಸನ್ ಘೋಡೆ ಒತ್ತಾಯಿಸಿದ್ದಾರೆ.

ಮೂರ್ತಿ ಇರುವ ಸ್ಥಳದಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿದ್ದು, ಅಕ್ಕ ಪಕ್ಕದ ಮಾಂಸದ ಅಂಗಡಿಯವರು ತ್ಯಾಜ್ಯ ಹಾಕುತ್ತಿದ್ದಾರೆ. ಇದರಿಂದ ದಲಿತ ನಾಯಕರಿಗೆ ಅಪಮಾನ ಮಾಡಿದಂತಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅವರಿಗೆ ಗುರುವಾರ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಕನಿಷ್ಠ ಒಂದು ಎಕರೆ ಪ್ರದೇಶದಲ್ಲಿ ಮೂರ್ತಿ ಸ್ಥಾಪಿಸಿ, ಸೌಂದರ್ಯೀಕರಿಸಿ ಜಗಜೀವನರಾಂ ಅವರಿಗೆ ಗೌರವ ಸಲ್ಲಿಸಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net