ರೇವಪಯ್ಯ ಮೂರ್ತಿ ಪ್ರತಿಷ್ಠಾಪನೆ ಗುರುವಾರ

Revapayya - Copy
Published on

ಬೀದರ್: ಔರಾದ್ ತಾಲ್ಲೂಕಿನ ಸೋರಳ್ಳಿ ಗ್ರಾಮದ ರೇವಪಯ್ಯ ಮಂದಿರದಲ್ಲಿ ನೂತನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಗುರುವಾರ (ಏ.10) ಬೆಳಿಗ್ಗೆ 10ಕ್ಕೆ ನಡೆಯಲಿದೆ.

ತಮಲೂರಿನ ಶಿವಾನಂದ ಶಿವಾಚಾರ್ಯ ಸಾನಿಧ್ಯ, ಬೇಮಳಖೇಡದ ಡಾ. ರಾಜಶೇಖರ ಶಿವಾಚಾರ್ಯ ನೇತೃತ್ವ, ಚಾಂಬೋಳದ ಅಭಿನವ ರುದ್ರಮುನಿ ಪಟ್ಟದ್ದೇವರು ಸಮ್ಮುಖ ವಹಿಸುವರು. ಶಾಸಕ ಪ್ರಭು ಚವಾಣ್ ಅಧ್ಯಕ್ಷತೆ ವಹಿಸುವರು.

ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ತಹಶೀಲ್ದಾರ್ ಮಲಶೆಟ್ಟಿ ಚಿದ್ರಿ ಮುಖ್ಯ ಅತಿಥಿಗಳಾಗಿ, ಧನ್ನೂರ(ಎಚ್)ದ ಗಂಗಾಧರ ಸ್ವಾಮಿ, ಪ್ರಮುಖರಾದ ಸಂಜುಕುಮಾರ ಸ್ವಾಮಿ ಕಂದಗೂಳ, ವಿಶ್ವನಾಥ ಕೋಟೆ, ಸಿದ್ಧಲಿಂಗ ಕಣಜಿ, ಶಿವಕುಮಾರ ಸೋಲಪುರ, ಶಿವಕುಮಾರ ತರನಳ್ಳಿ, ಆರೋಗ್ಯ ಇಲಾಖೆಯ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಶಿವಶಂಕರ ಬೇಮಳಗಿ ಅತಿಥಿಗಳಾಗಿ ಪಾಲ್ಗೊಳ್ಳುವರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ನಿರ್ದೇಶಕ ಪ್ರವೀಣ್ ಆರ್. ಸ್ವಾಮಿ ಅವರನ್ನು ಸನ್ಮಾನಿಸಲಾಗುವುದು ಎಂದು ಕಾರ್ಯಕ್ರಮದ ಉಸ್ತುವಾರಿ ಮಹಾಲಿಂಗ ಸ್ವಾಮಿ ಚಟ್ನಳ್ಳಿ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net