ಸಪ್ತಗಿರಿ ಕಾಲೇಜಿಗೆ ಶೇ 98.46 ಫಲಿತಾಂಶ

Vaishnavi N. 95.16% - Copy
Published on

ಬೀದರ್: ಇಲ್ಲಿಯ ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಸಂಚಾಲಿತ ಸಪ್ತಗಿರಿ ಪದವಿಪೂರ್ವ ವಿಜ್ಞಾನ ಕಾಲೇಜಿಗೆ ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 98.46 ರಷ್ಟು ಫಲಿತಾಂಶ ಬಂದಿದೆ.

ಪರೀಕ್ಷೆಗೆ ಹಾಜರಾದ 196 ವಿದ್ಯಾರ್ಥಿಗಳ ಪೈಕಿ 35 ಅಗ್ರಶ್ರೇಣಿ, 138 ಪ್ರಥಮ ದರ್ಜೆ ಹಾಗೂ 20 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ವೈಷ್ಣವಿ ಎನ್. ಶೇ 95.16, ಭುವನೇಶ್ವರಿ ಪಿ. ಶೇ 93.33, ನಿಶ್ಚಿತಾ ಎಸ್. ಶೇ 93, ಭಾಗ್ಯಶ್ರೀ ಶೇ 92.33, ದೀಪಿಕಾ ಡಿ. ಶೇ 91.16, ಪೃಥ್ವಿರಾಜ ಕೆ. ಶೇ 91.16, ಅಭಿಷೇಕ ಡಿ. ಶೇ 91, ಐಶ್ವರ್ಯ ಎಸ್. ಶೇ 91, ಶಿವನಂದಾ ಬಿ. ಶೇ 90.16, ಸುದರ್ಶನ ಎಸ್. ಶೇ 90 ರಷ್ಟು ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರದಲ್ಲಿ ಅನೇಕ ವಿದ್ಯಾರ್ಥಿಗಳು 100ಕ್ಕೆ 100 ಅಂಕ ಗಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ಡಿ. ತಾಂದಳೆ, ಕಾರ್ಯದರ್ಶಿ ಗೋಪಾಲ್ ಡಿ. ತಾಂದಳೆ, ಕಾಲೇಜು ಪ್ರಾಚಾರ್ಯ ಗೋವಿಂದ ಡಿ. ತಾಂದಳೆ ಹಾಗೂ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net