

ಬೀದರ್: ನಗರದ ಶ್ರೀ ಸ್ವಾಮಿ ನರೇಂದ್ರ ಪದವಿಪೂರ್ವ ಕಾಲೇಜಿಗೆ ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಲಭಿಸಿದೆ.
8 ವಿದ್ಯಾರ್ಥಿಗಳು ಅಗ್ರಶ್ರೇಣಿ, 69 ಪ್ರಥಮ ದರ್ಜೆ ಹಾಗೂ 29 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಐಶ್ವರ್ಯ ಶರಣಯ್ಯ ಶೇ 93, ಕೀರ್ತಿ ಸುರೇಶ ಶೇ 91, ಸುಕನ್ಯ ಚನ್ನಯ್ಯ ಸ್ವಾಮಿ ಶೇ 89.7, ಸಹನಾ ಶಿವಶಂಕರ ಶೇ 88.8, ಪವಿತ್ರ ಸಂಜುಕುಮಾರ ಶೇ 87.8, ವಂದನ ರಾಜಕುಮಾರ ಶೇ 87.8, ಕೀರ್ತಿ ಅಮೃತ ಶೇ 87.3, ದಿವ್ಯದತ್ತಾ ಅನೀಲಕುಮಾರ ಶೇ 85.2, ಸುಲೋಚನಾ ರಾಜಪ್ಪ ಶೇ 84.7, ಅರ್ಚನಾ ಭೀಮರಾವ್ ಶೇ 84.3, ಮಹಾದೇವಿ ಬಸವರಾಜ ಶೇ 84, ಶಿವಾನಿ ಹಣಮಂತ ಶೇ 83.7, ಅಂಜಲಿ ಸತೀಶಕುಮಾರ 83.5, ಐಶ್ವರ್ಯ ಮನೋಹರ ಶೇ 83.5 ಅಂಕ ಗಳಿಸಿದ್ದಾರೆ ಎಂದು ಪ್ರಾಚಾರ್ಯೆ ಕಲ್ಪನಾ ಮಠಪತಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಕಾಂತ ಪಾಟೀಲ, ಕಾರ್ಯದರ್ಶಿ ಅಭಿಷೇಕ ಪಾಟೀಲ, ನಿರ್ದೇಶಕಿ ಕಲ್ಪನಾ ಮಠಪತಿ ಹಾಗೂ ಸಿಬ್ಬಂದಿ ಪ್ರಶಂಸಿಸಿದ್ದಾರೆ.