

ಬೀದರ್: ತಾಲ್ಲೂಕಿನ ಗೋರನಳ್ಳಿ ಸಮೀಪದ ಶರಣಬಸವೇಶ್ವರ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಕಾಲೇಜಿಗೆ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 97.18 ರಷ್ಟು ಫಲಿತಾಂಶ ದೊರೆತಿದೆ.
ಪರೀಕ್ಷೆ ಬರೆದ 142 ವಿದ್ಯಾರ್ಥಿಗಳಲ್ಲಿ 138 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
16 ವಿದ್ಯಾರ್ಥಿಗಳು ಅಗ್ರಶ್ರೇಣಿ, 110 ಪ್ರಥಮ ದರ್ಜೆ ಹಾಗೂ 10 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಗಣಿತ ಹಾಗೂ ಜೀವ ವಿಜ್ಞಾನದಲ್ಲಿ ತಲಾ ಒಬ್ಬರು ವಿದ್ಯಾರ್ಥಿಗಳು ಗರಿಷ್ಠ ಅಂಕ ಗಳಿಸಿ ಸಾಧನೆಗೈದಿದ್ದಾರೆ ಎಂದು ಪ್ರಾಚಾರ್ಯ ಡಾ. ಸತೀಶ ಪ್ರತಾಪುರ ತಿಳಿಸಿದ್ದಾರೆ.
ದರ್ಶನ್ ಶಿವಕುಮಾರ ಶೇ 95.11, ವೆಂಕಟೇಶ್ ಮರಕುಂದಾ ಶೇ 93.83, ಸುಷ್ಮಾ ಶೇ 93.5, ನವೀನ್ ಕೇಶು ಶೇ 91.83, ಸುಶೀಲ್ ಹಣಮಂತ ಶೇ 91.5, ರಕ್ಷಿತಾ ಜಗದೀಶ್ ಶೇ 91.16, ಕಮಲಾಕರ್ ಅಮೃತಪ್ಪ 90.16, ಸುಮೀತ್ ಸಂತೋಷ್ 89.83, ಶ್ರೀಕಾಂತ ರೇವಣಸಿದ್ದಪ್ಪ 88.67 ರಷ್ಟು ಅಂಕ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಶರಣಬಸವಪ್ಪ ಅಪ್ಪ, ಮಾತೆ ಡಾ. ದಾಕ್ಷಾಯಿಣಿ, ಚಿ. ದೊಡ್ಡಪ್ಪ ಅಪ್ಪ, ಕಾರ್ಯದರ್ಶಿ ಬಸವರಾಜ ದೇಶಮುಖ ಕೊಂಡಾಡಿದ್ದಾರೆ.