ನರೇಂದ್ರ ಕಾಲೇಜಿನಲ್ಲಿ ಜಗಜೀವನರಾಂ ಜಯಂತಿ ಆಚರಣೆ

Swamy Narendra College Babu Jagjeevanram Jayanti Photo
Published on

ಬೀದರ್: ನಗರದ ಸ್ವಾಮಿ ನರೇಂದ್ರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 118ನೇ ಜಯಂತಿ ಆಚರಿಸಲಾಯಿತು.

ಕಾಲೇಜು ನಿರ್ದೇಶಕಿ ಕಲ್ಪನಾ ಮಠಪತಿ ಅವರು ಜಗಜೀವನರಾಂ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಜಗಜೀವನರಾಂ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ. ಹಸಿರು ಕ್ರಾಂತಿ ಹರಿಕಾರರೆಂದೇ ಪ್ರಖ್ಯಾತಿ ಪಡೆದಿದ್ದರು ಎಂದು ಅವರು ಹೇಳಿದರು.

ಪ್ರಾಚಾರ್ಯೆ ಮಂಗಲಾ ಎಸ್., ಸಿಬ್ಬಂದಿ ಮೇನಕಾ, ಪ್ರಜಕ್ತ, ಪಾರ್ವತಿ, ಶಶಿಕಾಂತ, ಪ್ರಕಾಶ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net