ಬೀದರ್: ತಾಲ್ಲೂಕಿನ ಮನ್ನಳ್ಳಿ ಗ್ರಾಮದ ಬಸವ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಬೀದರ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಏಪ್ರಿಲ್ 6 ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 1.30 ರ ವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಡಾ. ಸುಭಾಷ್ ಕರ್ಪೂರ, ಡಾ. ರಾಜಶೇಖರ ಪಾಟೀಲ, ಡಾ. ರಾಜಶೇಖರ ಸೇಡಂಕರ್, ಡಾ. ವಿ.ವಿ. ನಾಗರಾಜ, ಡಾ. ಸಿದ್ಧಲಿಂಗೇಶ್ವರ ಎ. ಮಠಪತಿ, ಡಾ. ನಿತಿನ್ ಗುದಗೆ, ಡಾ ಅಕ್ಷಯ ಜಗತಾಪ್, ಡಾ. ಮಹೇಶ ಚನಶೆಟ್ಟಿ, ಡಾ. ಶಿವಕುಮಾರ ಪಾಟೀಲ, ಡಾ. ಪ್ರಶಾಂತ ಪಾಟೀಲ, ಡಾ. ಸುಪ್ರಿಯಾ ಕೋಡಗೆ ಪಾಟೀಲ, ಡಾ. ಪರಮೇಶ್ವರ ಬಿರಾದಾರ, ಡಾ. ವಿನಾಯಕ ಜ್ಯಾಂತೆ, ಡಾ. ಶಿವಾಂಗಿ ಪಾಟೀಲ, ಡಾ. ಬಸವಪ್ರಸಾದ್ ಪಾಟೀಲ, ಎಸ್.ಬಿ. ಪಾಟೀಲ ದಂತ ಆಸ್ಪತ್ರೆ ಹಾಗೂ ಮೇಗೂರ್ ಐ ಕೇರ್ ಆಸ್ಪತ್ರೆಯ ವೈದ್ಯರು ಪಾಲ್ಗೊಳ್ಳಲಿದ್ದಾರೆ ಎಂದು ರೋಟರಿ ಕ್ಲಬ್ ಬೀದರ್ ಅಧ್ಯಕ್ಷ ಸೋಮಶೇಖರ ಪಾಟೀಲ ಹಾಗೂ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ತಿಳಿಸಿದ್ದಾರೆ.
ಶಿಬಿರದಲ್ಲಿ ಹೃದಯ, ಕಣ್ಣು, ಕಿವಿ, ಮೂಗು, ಗಂಟಲು, ಎಲುಬು, ಚರ್ಮ, ಹಲ್ಲು, ಕಣ್ಣು, ನರ ರೋಗಗಳ ತಪಾಸಣೆ ಮಾಡಲಾಗುವುದು. ಇಸಿಜಿ ಟೂಡಿ, ರಕ್ತದೊತ್ತಡ, ಮಧುಮೇಹ, ರಕ್ತ ಪರೀಕ್ಷೆ ಉಚಿತವಾಗಿ ಮಾಡಲಾಗುವುದು. ಔಷಧ ಸಹ ವಿತರಿಸಲಾಗುವುದು ಎಂದು ಹೇಳಿದ್ದಾರೆ. ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.