ಕಾರ್ಮಿಕರ ಮಕ್ಕಳಿಗೆ ಉಚಿತ ಪ್ರವೇಶ

Published on

ಬೀದರ್: ಇಲ್ಲಿಯ ಮಡಿವಾಳ ವೃತ್ತ ಸಮೀಪದ ಗುಡ್‍ವಿಲ್ ಪಬ್ಲಿಕ್ ಶಾಲೆಯು 2025-26ನೇ ಶೈಕ್ಷಣಿಕ ವರ್ಷದಲ್ಲಿ ಶಾಲೆಯ ಶೇ 25 ಸ್ಥಾನಗಳಲ್ಲಿ ಕಾರ್ಮಿಕರ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸುವುದಾಗಿ ಪ್ರಕಟಿಸಿದೆ.

ಗುರುತಿನ ಚೀಟಿ ಹೊಂದಿದ 1 ರಿಂದ 10 ರ ತರಗತಿ ವರೆಗಿನ ಕಾರ್ಮಿಕರ ಮಕ್ಕಳಿಗೆ ಉಚಿತ ಪ್ರವೇಶ ಒದಗಿಸಲಾಗುವುದು ಎಂದು ಶಾಲೆಯ ಪ್ರಾಚಾರ್ಯೆ ಪ್ರೇಮಾಕುಮಾರಿ ತಳವಾಡಕರ್ ತಿಳಿಸಿದ್ದಾರೆ.

ಉಚಿತ ಪ್ರವೇಶಕ್ಕೆ ಏಪ್ರಿಲ್ 25 ಕೊನೆಯ ದಿನವಾಗಿದೆ. ಪ್ರವೇಶ ಹಾಗೂ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9538777031 ಗೆ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net