ದುಬೈನಲ್ಲಿ ಕನ್ನಡ ಕವನ ವಾಚಿಸಿದ ಟೋಕರೆ

Tokare Samnan Photo
Published on

ಬೀದರ್: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಕೋಶಾಧ್ಯಕ್ಷ ಶಿವಶಂಕರ ಟೋಕರೆ ಅವರು ದುಬೈನಲ್ಲಿ ಕನ್ನಡ ಕವನ ವಾಚಿಸಿ ಗಮನ ಸೆಳೆದಿದ್ದಾರೆ.

ದುಬೈನ ಇಂಡಿಯಾ ಇಂಟರ್‍ನ್ಯಾಷನಲ್ ಐಕಾನ್ ಅವಾರ್ಡ್ ವೇದಿಕೆಯಲ್ಲಿ ಕನ್ನಡದಲ್ಲಿ ಕವನ ವಾಚನ ಮಾಡಿ ಕನ್ನಡಾಭಿಮಾನ ಮೆರೆದಿದ್ದಾರೆ.

ಸನ್ಮಾನ: ದುಬೈನಲ್ಲಿ ಕನ್ನಡ ಕವನ ವಾಚಿಸಿದ್ದಕ್ಕಾಗಿ ರಾಜ್ಯ ಲಿಂಗಾಯತ ನೌಕರರ ಸಂಘದ ರಾಜ್ಯ ಅಧ್ಯಕ್ಷರೂ ಆದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಶಿವರಾಜ ಕಪಲಾಪುರೆ ನಗರದಲ್ಲಿ ಮಂಗಳವಾರ ಟೋಕರೆ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ಟೋಕರೆ ಅವರು ವಿದೇಶದಲ್ಲಿ ಮಾತೃಭಾಷೆ ಅಭಿಮಾನ ಮೆರೆದಿದ್ದಾರೆ. ಕನ್ನಡದ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಅವರು ಹೇಳಿದರು.

ಜಿಲ್ಲಾ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ದಿಲೀಪ್ ಡೊಂಗರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net