ಪ್ರದೀಪ್ ಜ್ಯಾಂತೆಗೆ ಪಿಎಚ್‍ಡಿ ಪದವಿ

Pradeep Jante - Copy
Published on

ಬೀದರ್: ಭಾಲ್ಕಿ ತಾಲ್ಲೂಕಿನ ಜೈನಾಪುರದ ಪ್ರದೀಪ್ ಗುಂಡಪ್ಪ ಜ್ಯಾಂತೆ ಅವರಿಗೆ ಪುಣೆಯ ವಿಶ್ವಕರ್ಮ ವಿಶ್ವವಿದ್ಯಾಲಯ ಪಿಎಚ್‍ಡಿ ನೀಡಿದೆ.

ಜಗದೀಶ್ ವಿ. ತಾವಡೆ ಅವರ ಮಾರ್ಗದರ್ಶನದಲ್ಲಿ ‘ಆ್ಯನ್ ಅನಲೈಸಿಸ್ ಆಫ್ ನ್ಯಾನೊ ಲಿಕ್ವಿಡ್ ಥಿನ್ ಫಿಲ್ಮ್ ಫ್ಲೋ ಓವರ್ ಎ ಹಾರಿಝಾಂಟಲ್ ಮೂವಿಂಗ್ ಪ್ಲೇಟ್ ಬೈ ಅನಾಲೈಟಿಕಲ್ ಆ್ಯಂಡ್ ನ್ಯೂಮೆರಿಕಲ್ ಮೆಥೋಡ್ಸ್’ ಕುರಿತು ಅವರು ಮಂಡಿಸಿದ ಪ್ರೌಢ ಪ್ರಬಂಧವನ್ನು ವಿಶ್ವವಿದ್ಯಾಲಯ ಪಿಎಚ್‍ಡಿಗೆ ಮಾನ್ಯ ಮಾಡಿದೆ.

ಪ್ರದೀಪ್ ಜ್ಯಾಂತೆ ಬೀದರ್‍ನ ಲಿಂಗಾಯತ ಮಹಾ ಮಠದ ಸಕ್ರಿಯ ಸೇವಾಧಾರಿಯಾಗಿದ್ದಾರೆ. ಅವರಿಗೆ ಪಿಎಚ್‍ಡಿ ಪದವಿ ದೊರೆತಿದ್ದಕ್ಕೆ ಲಿಂಗಾಯತ ಮಹಾ ಮಠದ ಕಾರ್ಯದರ್ಶಿ ಚನ್ನಬಸವ ಹಂಗರಗಿ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net