ಪಂಚಗವ್ಯ ಉಚಿತ ತಪಾಸಣಾ ಶಿಬಿರ

Published on

ಬೀದರ್: ಉತ್ತರ ಕರ್ನಾಟಕ ಪ್ರಾಂತ ಗೋ ಸೇವಾ ಗತಿ ವಿಧಿ ಹಾಗೂ ನಾಗೋರಾದ ಕಾಮಧೇನು ಗೋಶಾಲೆ ವತಿಯಿಂದ ನಗರದ ಸಾಯಿ ಪುಷ್ಪಾಂಜಲಿ ಕಲ್ಯಾಣ ಮಂಟಪದ ಹತ್ತಿರ ಶನಿವಾರ (ಮಾ.22) ಸಂಜೆ 4 ರಿಂದ 6 ರ ವರೆಗೆ ಪಂಚಗವ್ಯ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.

ಡಾ. ಡಿ.ಪಿ. ರಮೇಶ, ಡಾ. ಅಶ್ವಿನಕುಮಾರ ವಾಘಮಾರೆ ಹಾಗೂ ಆಕ್ಯುಪ್ರೇಶರ್ ಪರಿಣಿತ ಶ್ರೀಕಾಂತ ಮೋದಿ ಅವರು ತಪಾಸಣೆ ಮಾಡಲಿದ್ದಾರೆ.

ಹೆಸರು ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 7411993300 (ಶಿವಕುಮಾರ ಹಿರೇಮಠ) ಅಥವಾ 9449829468 (ಸಿ.ಬಿ. ರೆಡ್ಡಿ) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net