

ಬೀದರ್: ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಸಾಧನೆ ಮಾಡಲು ಪ್ರಯತ್ನಿಸಬೇಕು ಎಂದು ನವೀನ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಕಾಮಶೆಟ್ಟಿ ಚಿಕ್ಕಬಸೆ ಹೇಳಿದರು.
ನಗರದ ಕುಂಬಾರವಾಡ ರಸ್ತೆಯಲ್ಲಿ ಇರುವ ನವೀನ್ ಪಬ್ಲಿಕ್ ಶಾಲೆಯಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಛಲವಿದ್ದರೆ ಯಾವುದೂ ಅಸಾಧ್ಯವಲ್ಲ. ನಿರಂತರ ಪರಿಶ್ರಮದಿಂದ ಅಂದುಕೊಂಡದ್ದನ್ನು ಸಾಧಿಸಬಹುದು ಎಂದು ತಿಳಿಸಿದರು.
ಉದ್ಯಮಿ, ವಿಜ್ಞಾನಿ, ರಾಜಕಾರಣಿ, ಉನ್ನತ ಅಧಿಕಾರಿ ಮೊದಲಾದ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ಕೊಡುಗೆ ನೀಡಬೇಕು. ಅಕ್ಷರ ಕಲಿತ ಶಾಲೆ, ಶಿಕ್ಷಕರು ಹಾಗೂ ಪಾಲಕರಿಗೆ ಕೀರ್ತಿ ತರಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಾದ ಅವಿನಾಶ್ ಹಾಗೂ ಶಿವಾನಿ ಹಡಪದ ಮಾತನಾಡಿದರು. ಶಾಲೆಯ ಕಾರ್ಯದರ್ಶಿ ಶೀಲಾ ಚಿಕ್ಕಬಸೆ, ಮುಖ್ಯಶಿಕ್ಷಕ ರಾಜಪ್ಪ ಬಿರಾದಾರ, ಶಿಕ್ಷಕಿಯರಾದ ಸುಧಾರಾಣಿ, ಪ್ರವೀಣಾ, ದೀಪಾರಾಣಿ, ಸುಜಾತಾ, ಆರತಿ, ಅಂಜಲಿ, ಸುಮಾ, ಶಿವಲೀಲಾ, ಭಾನುಪ್ರಿಯಾ, ಉಷಾ, ವಿದ್ಯಾರ್ಥಿನಿ ವೀರಿಕಾ ತಗಾರೆ ಇದ್ದರು. ಸಾಯಿಪ್ರಸಾದ ಸ್ವಾಗತಿಸಿದರು. ಸಂಗಮೇಶ್ವರಿ ನಿರೂಪಿಸಿದರು.