ಬೀದರ್: ಬೀದರ್‍ನಿಂದ ಭಾಲ್ಕಿ ತಾಲ್ಲೂಕಿನ ಜ್ಯಾಂತಿ ಗ್ರಾಮಕ್ಕೆ ಕಣಜಿ ಮಾರ್ಗವಾಗಿ ನಿತ್ಯ ಮಧ್ಯಾಹ್ನ ಬಸ್ ಓಡಿಸಬೇಕು ಎಂದು ನಮ್ಮ ಕರ್ನಾಟಕ ಸೇನೆ ಒತ್ತಾಯಿಸಿದೆ.
ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಜಿ. ಪಾಟೀಲ ಅವರು ಈ ಕುರಿತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಬೆಳಿಗ್ಗೆ 6ಕ್ಕೆ ಕಣಜಿಯಿಂದ ಹುಣಜಿ, ಜ್ಯಾಂತಿ, ನೇಳಗಿ, ಸಿದ್ಧೇಶ್ವರ ವಾಡಿ, ತರನಳ್ಳಿ, ಹಲಬರ್ಗಾ ಮಾರ್ಗವಾಗಿ ಬೀದರ್‍ಗೆ ಬಸ್ ಇದೆ. ಆದರೆ, ಬೀದರ್‍ನಿಂದ ಮರಳಲು ಸಂಜೆ 4 ಗಂಟೆಗೆ ಬಸ್ ಇದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕಾರಣ, ಮಧ್ಯಾಹ್ನ 1 ರಿಂದ 2 ರ ಮಧ್ಯೆ ಬೀದರ್‍ನಿಂದ ಜ್ಯಾಂತಿಗೆ ಬಸ್ ಓಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬೀದರ್- ರುದನೂರ ಬಸ್‍ನ್ನು ಜ್ಯಾಂತಿವರೆಗೆ ವಿಸ್ತರಿಸಬೇಕು ಎಂದೂ ಬೇಡಿಕೆ ಮಂಡಿಸಿದ್ದಾರೆ.