

ಬೀದರ್: ಅಖಿಲ ಭಾರತ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ವತಿಯಿಂದ ಇಲ್ಲಿಯ ಅಂಬೇಡ್ಕರ್ ವೃತ್ತ ಸಮೀಪದ ಹೋಟೆಲ್ ಮಯೂರಾ ಬರೀದ್‍ಶಾಹಿಯಲ್ಲಿ ಶುಕ್ರವಾರ ಕೇಕ್ ಕತ್ತರಿಸಿ ಪಕ್ಷದ ಸಂಸ್ಥಾಪಕ ಕಾನ್ಶಿರಾಂ ಅವರ 91ನೇ ಜನ್ಮದಿನ ಆಚರಿಸಲಾಯಿತು.
ಕಾನ್ಶಿರಾಂ ಅವರ ಬಹುಜನ ಚಳವಳಿ ದೇಶದ ಮನೆ ಮನೆಗೂ ತಲುಪಬೇಕು ಎಂದು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ದತ್ತು ಸೂರ್ಯವಂಶಿ ಹೇಳಿದರು.
ಕಾನ್ಶಿರಾಂ ಅವರು ಬಹುಸಂಖ್ಯಾತರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಿದ್ದರು. ಅವರಿಗೆ ರಾಜಕೀಯ ಅಧಿಕಾರ ನೀಡಿದ್ದರು ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಯೋಹಾನ್ ಡಿಸೋಜಾ ಚಿಲ್ಲರ್ಗಿ ಸ್ಮರಿಸಿದರು.
ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಸಂಜುಕುಮಾರ ಮೇದ, ಸತ್ಯದೀಪ ಹಾವನೋರ್, ಕಾರ್ಯದರ್ಶಿ ಜಿ. ಆಸ್ಕರ್, ಜಿಲ್ಲಾ ಘಟಕದ ಸಂಯೋಜಕ ಮಾಸ್ಟರ್ ಶಾದ್ರಕ್, ಉಪಾಧ್ಯಕ್ಷ ಗುಣವಂತ ಸಿಂಧೆ, ಬೀದರ್ ದಕ್ಷಿಣ ಘಟಕದ ಅಧ್ಯಕ್ಷ ಉಮೇಶ್ ಗುತ್ತೆದಾರ್, ಪ್ರಧಾನ ಕಾರ್ಯದರ್ಶಿ ಮಾರ್ಟಿನ್ ಮನ್ನಳ್ಳಿ, ಬೀದರ್ ಉತ್ತರ ಘಟಕದ ಅಧ್ಯಕ್ಷ ರಾಜಕುಮಾರ ಡೊಂಗ್ರೆ, ಉಪಾಧ್ಯಕ್ಷ ಸಾಲೋಮನ್, ಬೀದರ್ ನಗರ ಘಟಕದ ಅಧ್ಯಕ್ಷ ಡ್ಯಾನಿಯಲ್ ಮತ್ತಿತರರು ಇದ್ದರು.