

ಬೀದರ್: ಕರ್ನಾಟಕ ರಾಜ್ಯ ಸರ್ಕಾರಿ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಆಯ್ಕೆಯಾಗುವ ಮೂಲಕ ಸಂಜೀವ್ ಬಿ. ಸೂರ್ಯವಂಶಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾದರು.
ಪದಾಧಿಕಾರಿಗಳು: ಶಾಂತಕುಮಾರ ಎಂ. (ಉಪಾಧ್ಯಕ್ಷ), ವೆಂಕಟ ಕೊಂಡಿಬಾ (ಪ್ರಧಾನ ಕಾರ್ಯದರ್ಶಿ), ಸಂಜಯ್ ಬಿರಾದಾರ (ಖಜಾಂಚಿ), ಸುಧಾಕರ (ಸಂಘಟನಾ ಕಾರ್ಯದರ್ಶಿ) ಮತ್ತು ಮಾಜಿದ್ ಅಲಿ (ಜಂಟಿ ಕಾರ್ಯದರ್ಶಿ) ಸೇರಿದ್ದಾರೆ.