ಬೀದರ್ ವಿವಿ ಸಿಂಡಿಕೇಟ್‍ಗೆ ಆರು ಸದಸ್ಯರ ನೇಮಕ

Members Sanman - Copy
Published on

ಬೀದರ್: ರಾಜ್ಯ ಸರ್ಕಾರ ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್‍ಗೆ ಆರು ಸದಸ್ಯರನ್ನು ನೇಮಕ ಮಾಡಿದೆ.

ಶಿವನಾಥ ಪಾಟೀಲ, ಸಚಿನ್ ಮಲ್ಕಾಪುರ, ವಿಠ್ಠಲದಾಸ್ ಪ್ಯಾಗೆ, ಅರ್ಜುನ ಕನಕ, ಅಬ್ದುಲ್ ಸತ್ತಾರ್ ಚಾಂದಸಾಬ್ ಹಾಗೂ ವೈಷ್ಣವಿ ಆರ್. ಪಾಟೀಲ ಅವರನ್ನು ಮೂರು ವರ್ಷದ ಅವಧಿ ಅಥವಾ ಮುಂದಿನ ಆದೇಶದ ವರೆಗೆ ನೇಮಿಸಿ ಆದೇಶ ಹೊರಡಿಸಿದೆ.

ಸನ್ಮಾನ: ಬೀದರ್ ವಿಶ್ವವಿದ್ಯಾಲಯ ನೂತನ ಸಿಂಡಿಕೇಟ್ ಸದಸ್ಯರಾದ ಶಿವನಾಥ ಪಾಟೀಲ, ವಿಠ್ಠಲದಾಸ್ ಪ್ಯಾಗೆ, ಸಚಿನ್ ಮಲ್ಕಾಪುರ ಹಾಗೂ ಅಬ್ದುಲ್ ಸತ್ತಾರ್ ಚಾಂದ್ ಸಾಬ್ ಅವರನ್ನು ನಗರದ ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿನೋದಕುಮಾರ ಅಪ್ಪೆ ಅವರ ಕಚೇರಿಯಲ್ಲಿ ಶುಕ್ರವಾರ ಸನ್ಮಾನಿಸಲಾಯಿತು.

ವಿನೋದಕುಮಾರ ಅಪ್ಪೆ ಅವರು ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.

ಪ್ರಮುಖರಾದ ಅರ್ಜುನರಾವ್ ಹಾವೆ, ವಿನೋದ ಬಂದಗೆ, ಪವನ್ ಮಿಠಾರೆ, ಸೂರ್ಯಕಾಂತ ಸಾಧುರೆ, ರಾಹುಲ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net