ವಿಮೆಗಾಗಿ ಅನುದಾನ ಮೀಸಲಿಡಿ

M P Mudale
Published on

ಬೀದರ್: ಪತ್ರಕರ್ತರಿಗಾಗಿ ಆರೋಗ್ಯವಿಮೆ ಯೋಜನೆಡಿ ಬಜೆಟ್ನಲ್ಲಿ ಅನುದಾನ ಮೀಸಲಿಡಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಖಜಾಂಚಿ ಎಂ.ಪಿ. ಮುದಾಳೆ ಆಗ್ರಹಿಸಿದ್ದಾರೆ.

ಈ ಕುರಿತು ಸಿಎಂ ಅವರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಕಾರಿಗೆ ಸಲ್ಲಿಸಿ, ಸಾರ್ವಜನಿಕರು ಹಾಗೂ ಸರ್ಕಾರದ ನಡುವೆ ಸೇತುವೆಯಂತೆ ಪತ್ರಕರ್ತರು ಕಾರ್ಯನಿರ್ವಹಿಸುತ್ತಾರೆ. ಸುದ್ದಿಗಳನ್ನು ಸಂಗ್ರಹಿಸಲು ಅವರು ದೈನಂದಿನ ಜೀವನದಲ್ಲಿ ವಿವಿಧ ಹಾನಿಕಾರಕ, ಅಪಾಯಕಾರಿ ಪರಿಸ್ಥಿತಿ ಎದುರಿಸುತ್ತಾರೆ. ಅವರ ಸುರಕ್ಷತೆ ಹಾಗೂ ಭವಿಷ್ಯದ ಭದ್ರತೆಗಾಗಿ ವಿಶೇಷ ವಿಮಾ ಯೋಜನೆ ಒದಗಿಸುವ ಅಗತ್ಯವಿದೆ. ಬಜೆಟ್ ನಲ್ಲಿ ಪತ್ರಕರ್ತರ ವಿಮೆಗಾಗಿ 100 ಕೋಟಿ ರೂ. ಮೀಸಲಿಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net