ಬಾಲಾಜಿ ಬಿರಾದಾರ್ ಪೆನಾಲ್ ಜಯ

NGO
Published on

ಬೀದರ್: ಎನ್.ಜಿ.ಒ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಚುನಾವಣೆಯಲ್ಲಿ ಬಾಲಾಜಿ ಬಿರಾದಾರ್ ನೇತೃತ್ವದ ಪೆನಾಲ್ ಜಯ ಗಳಿಸಿದೆ.

13 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅರವಿಂದ ಉಪ್ಪೆ, ಶರಣಪ್ಪ ನಾಗೂರ, ಬಾಲಜಿ ಬಿರಾದಾರ್, ಜಯದೀಪ ಪಾಂಡ್ರೆ, ಸಂಗೀತಾ ದತ್ತು, ವಿದ್ಯಾವತಿ ಸೋಮಶೇಖರ ಅವಿರೋಧ ಆಯ್ಕೆಯಾಗಿದ್ದಾರೆ.

ಏಳು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಂ.ಯಾಸೀರ್ ಅರಾಫತ್, ಕಲಾಲ್ ದೇವಿಪ್ರಸಾದ, ವೆಂಕಟ್ ಭಾಗ್ಯನಗರ, ಸುನೀಲ ಬಿರಾದಾರ್, ಸೂರ್ಯಕಾಂತ, ರಾಮಶೆಟ್ಟಿ ಕೆಂಚಾ ಹಾಗೂ ಶಿವಾನಂದ ಸ್ವಾಮಿ ಗೆಲುವು ಸಾಧಿಸಿದ್ದಾರೆ. ಮುಂದಿನ ಐದು ವರ್ಷದಲ್ಲಿ ನಿವೇಶನರಹಿತ ನೌಕರರಿಗೆ 1000 ನಿವೇಶನಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ ಎಂದು ಬಾಲಾಜಿ ಬಿರಾದಾರ್, ಪೀರಪ್ಪ ಔರಾದೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net