ಸೇತುವೆ ಕಾಮಗಾರಿಗೆ ಚಾಲನೆ

ashtur
Published on

ಬೀದರ್: ಅಷ್ಟೂರ ಗ್ರಾಮದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ರೈತರ ಜಮೀನು ಹಾಗೂ ಸ್ಮಶಾನಭೂಮಿಗೆ ತೆರಳುವ ರಸ್ತೆ ನಡುವೆ ಸೇತುವೆ ಅಗತ್ಯವಿರು ಹಿನ್ನೆಲೆಯಲ್ಲಿ ಸ್ಥಳೀಯರ ಬೇಡಿಕೆಯಂತೆ 72 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಾಲಮಿತಿಯಲ್ಲಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು ಎಂದರು.

ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆ, ಶುದ್ಧ ಕುಡಿಯುವ ನೀರು ಪೂರೈಕೆ, ಉತ್ತಮ ರಸ್ತೆ ನಿರ್ಮಾಣ ಹೀಗೆ ಅನೇಕ ಪ್ರಗತಿಪರ ಕಾರ್ಯಗಳ ಮೂಲಕ ಕ್ಷೇತ್ರದ ಎಲ್ಲ ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗೆ ಬದ್ಧನಾಗಿರುವೆ ಎಂದು ಹೇಳಿದರು.

ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಹಳ್ಳಿಗಳನ್ನು ಗುರುತಿಸಿ ಜೀವಜಲದ ಅಭಾವ ಎದುರಾಗದಂತೆ ನೋಡಿಕೊಳ್ಳಬೇಕು ಎಂದರು.

ಜಿಪಂ ಮಾಜಿ ಸದಸ್ಯ ಬಾಬುರಾವ ಮಲ್ಕಾಪುರ, ಗ್ರಾಪಂ ಅಧ್ಯಕ್ಷೆ ರೇಣುಕಾ ರಾಹುಲ್, ಪ್ರಮುಖರಾದ ಬಸವರಾಜ ಪಾಟೀಲ್, ಶಿವಕುಮಾರ ನಾಗಲಗಿದ್ದಿ, ರಾಹುಲ್ ಮೌರ್ಯ, ಮಹಾನಂದಾ ಕೋಟೆ, ಆಕಾಶ ಕೋಟೆ, ಲೋಕೇಶ ಜಾಂತೆ, ಸಂಗಶೆಟ್ಟಿ ಹಳ್ಳಿ, ಕಿರಣ್ ರಡ್ಡಿ, ಶಿವಕುಮಾರ ಸುಲ್ತಾನಪುರ, ಅರ್ಜುನ ಕಲಗೊಂಡ, ರಾಜು ಕೋಳಿ, ದಿಲೀಪ ಗುಮ್ಮಾ, ಭದ್ರು ಸ್ವಾಮಿ, ಮಹಾಂತೇಶ ಧರಗೊಂಡ, ತುಕಾರಾಮ ಕಲಾಲ್, ಬಾಬುರಾವ, ವಿನೋದ ಪಸಾರಗೆ, ಕುಶಲರಾವ ಶರಣಪ್ಪನೋರ್ ಇತರರಿದ್ದರು.

ಬಳಿಕ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ 1ರಿಂದ 5ನೇ ತರಗತಿ ಮಕ್ಕಳಿಗೆ ಶಾಸಕ ಡಾ.ಬೆಲ್ದಾಳೆ ಉಚಿತವಾಗಿ ಬ್ಯಾಗ್ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net